ಗೋಕಾಕ, 14- ತಾಲ್ಲೂಕಿನ ಮೇಲ್ಮಟ್ಟಿ ಗ್ರಾಮದ ಯೋಧರೊಬ್ಬರು ಹೃದಯಾಘಾತದಿಂದ ಔರಂಗಾಬಾದ್ ನ ಮಿಲಿಟರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಶಂಕರ ಬಾಳಪ್ಪ ಯಲಿಗಾರ (33) ಮೃತಪಟ್ಟಿದ್ದಾರೆ.
ಯೋಧನ ಮೃತದೇಹವು ಮೇಲ್ಮಟ್ಟಿ ಗ್ರಾಮಕ್ಕೆ ಇಂದು ತಲುಪಲಿದೆ. ಇನ್ನೂ ಗ್ರಾಮದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.