ಬೈಲಹೊಂಗಲ, ೯- ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ಬಿಳಿ ಬಣ್ಣದ ವಿಚಿತ್ರ ಬಲೂನ್ ಪತ್ತೆಯಾಗಿದ್ದು, ಬಲೂನ್ ನಲ್ಲಿ ಕೆಲ ಎಲೆಕ್ಟ್ರಾನಿಕ್ ವಸ್ತುಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿತ್ತು.
ಗದ್ದಿಕರವಿನಕೊಪ್ಪ ಗ್ರಾಮದ ಹೊಲದಲ್ಲಿ ಗುರುವಾರ ಮುಂಜಾನೆ ಈ ಬಲೂನ್ ಬಂದು ಬಿದ್ದಿತ್ತು. ಆತಂಕಗೊಂಡ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಬಂದು ಪರಿಶೀಲನೆ ನಡೆಸಿದರು.
ದೊಡ್ಡದಾದ ಬಲೂನ್ ನಲ್ಲಿ ಕೆಲ ಎಲೆಕ್ಟ್ರಾನಿಕ್ ವಸ್ತುಗಳು, ಬ್ಯಾಟರಿ ಪತ್ತೆಯಾಗಿದೆ. ಹೆಚ್ಚಿನ ಪರಿಶೀಲನೆಗೆ ಬೆಳಗಾವಿಗೆ ತರಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಚೀನಾ, ಅಮೇರಿಕಾ ಹಾಗೂ ಜರ್ಮನಿಯಲ್ಲಿ ಕಂಡು ಬರುವ ಬಲೂನ್ ನಂತೆ ಇದು ಕಂಡು ಬರುತ್ತಿದ್ದು, ಹೆಚ್ಚಿನ ಮಾಹಿತಿ ಸಿಗಬೇಕಾಗಿದೆ. ತಜ್ಞರ ತಂಡ ಪ್ರಾಥಮಿಕ ತಪಾಸಣೆ ಕೈಕೊಂಡಿದ್ದು ಈ ಬಲೂನ್ ಹವಾಮಾನ ಅಳಿಯುವ ಸಾಧನಗಳನ್ನು ಒಳಗೊಂಡಿದೆ. ಆತಂಕ ಪಡುವ ಅಗತ್ಯವಿಲ್ಲವೆಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ತಿಳಿಸಿದ್ದಾರೆ.