ಕೋಲಕತ್ತಾ, ೨- ಪಶ್ಚಿಮ ಬಂಗಾಳ ವ್ಯಕ್ತಿಯೊಬ್ಬ ಮದುವೆ ಕುರಿತಾಗಿ ನೂರಾರು ಆಸೆಗಳನ್ನೇ ಇಟ್ಟುಕೊಂಡಿದ್ದ. ಆದರೆ ವಿಪರ್ಯಾಸ ಅಂದರೆ ವಯಸ್ಸು 37 ಆಗಿದ್ದರೂ ಆತನಿಗೆ ಕಂಕಣ ಭಾಗ್ಯವೇ ಒಲಿದು ಬಂದಿರಲಿಲ್ಲ. ಅದರಿಂದ ನೊಂದ ಆ ವ್ಯಕ್ತಿ ನೇರವಾಗಿ ಹೋಗಿದ್ದು, ಮಾಟ ಮಂತ್ರ ಮಾಡುವ ಮಾಂತ್ರಿಕನ ಬಳಿ. ಈಗ ಅದೇ ಮಾಂತ್ರಿಕನ ಮಾತು ಕೇಳಿ 8 ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳದ ಬಂಕುರಾ ಎಂಬ ಜಿಲ್ಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಈ ವ್ಯಕ್ತಿ, ಮದುವೆ ಆಗುತ್ತಿಲ್ಲ ಎಂದು ನೊಂದು ಮಾಂತ್ರಿಕನ ಬಳಿ ಹೋಗಿದ್ದಾನೆ. ಮದುವೆಗೆ ಅನೇಕ ಅಡೆತಡೆಗಳಿವೆ ಎಂದು ಮಾಂತ್ರಿಕ ಹೇಳಿದ್ದಾನೆ. ಕೊನೆಗೆ ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಸಿಗಬೇಕು ಅಂದರೆ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗುವಂತೆ ಹೇಳಿದ್ದಾನೆ. ಅದನ್ನು ನಂಬಿ ಅಮಾಯಕಿ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ.
ಅತ್ಯಾಚಾರ ಮಾಡಿದಾಗ ಬಾಲಕಿಯ ಖಾಸಗಿ ಅಂಗದಿಂದ ಬಂದ ರಕ್ತವನ್ನು ತೊಯ್ದ ಬಟ್ಟೆಯಲ್ಲಿ ತಂದರೆ ಎಲ್ಲ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ಮಾಂತ್ರಿಕನ ಹೇಳಿದ್ದಾನೆ. ಈ ವ್ಯಕ್ತಿ ಆತ ಹೇಳಿದಂತೆ ಎಲ್ಲ ಮಾತನ್ನು ಚಾಚೂ ತಪ್ಪದೇ ಪಾಲಿಸಿದ್ಧಾನೆ.
ವೃತ್ತಿಯಲ್ಲಿ ಶಿಕ್ಷಕನಾಗಿ ಜ್ಞಾನದ ಬೆಳಕನ್ನು ಪಸರಿಸಬೇಕಾಗಿದ್ದ ಶಿಕ್ಷಕ ಈ ರೀತಿಯ ಮೂಢನಂಬಿಕೆಯನ್ನು ನಂಬಿ ಹೇಸಿಗೆ ತರಿಸುವ ಕೆಲಸ ಮಾಡಿರುವುದು ನಿಜಕ್ಕೂ ವಿಪರ್ಯಾಸ. ಪ್ರಕರಣ ಬೆಳಕಿಗೆ ಬಂದಾಕ್ಷಣ ಶಿಕ್ಷಕನನ್ನ ಬಂಧಿಸಲಾಗಿದೆ. ಜೊತೆಗೆ ಈ ರೀತಿಯ ನೀಚ ಕೆಲಸಕ್ಕೆ ಕುಮ್ಮಕ್ಕು ನೀಡಿದ್ದ ಮಾಂತ್ರಿಕನನ್ನು ಕೂಡಾ ಬಂಧಿಸಲಾಗಿದೆ.