ಗಂಗಾವತಿ : ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ಸಂದರ್ಭದಲ್ಲಿ 9 ಲಕ್ಷ ರೂಪಾಯಿ ಮೌಲ್ಯದ 18 ತೊಲೆ ಚಿನ್ನದ ಸರ ಎಗರಿಸಿ ಕಳ್ಳ ಪರಾರಿಯಾದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ನಾಗರತ್ನಾ ಗೋಪಾಲಶೆಟ್ಟಿ ಹುಲೆಹೈದರ ಎಂಬ ಮಹಿಳೆ ತನ್ನ ಪುತ್ರನ ಜೊತೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹುಲಿಹೈದರ್ ಗ್ರಾಮಕ್ಕೆ ತೆರಳಲು ಬಸ್ ಹತ್ತುವ ಸಂದರ್ಭದಲ್ಲಿ ತನ್ನ ಬ್ಯಾಗಿನಲ್ಲಿ ಇಟ್ಟಿದ್ದ ಒಂಭತ್ತು ಲಕ್ಷ ರೂಪಾಯಿ ಮೌಲ್ಯದ 18 ತೊಲೆ ಚಿನ್ನದ ಸರ ಕದ್ದಿದ್ದಾರೆ.
ಕೂಡಲೇ ಮಹಿಳೆ ಕಿರುಚಾಡಿದ್ದಾರೆ. ಅಷ್ಟರಲ್ಲಿಯೇ ಕಳ್ಳ ಪರಾರಿಯಾಗಿದ್ದಾನೆ. ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.