ಮಂಗಳೂರು, ೧೩- ಇತ್ತಿತ್ತಲಾಗಿ ಆರೋಗ್ಯವಂತರಿಗೆ ಹೃದಯಾಘಾತಗಳು ಇಷ್ಟೇಕೆ ಆಗುತ್ತಿವೆ ತಿಳಿಯದಾಗಿದೆ. ಹೃದಯಾಘಾತದಿಂದ ಮನೆಯಲ್ಲಿಯೇ ಕುಸಿದು ಬಿದ್ದು ರಾಷ್ಟ್ರಮಟ್ಟದ ವೇಟ್ ಲಿಫ್ಟರ್ ರಾಜೇಂದ್ರ ಪ್ರಸಾದ ಅವರು ವಿಧಿವಶರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ 39 ವರ್ಷದ ರಾಜೇಂದ್ರ ಪ್ರಸಾದ ಮೂಡುಬಿದರೆ ಆಳ್ವಾಸ್ ಕಾಲೇಜಿನಲ್ಲಿ ವೇಟ್ ಲಿಫ್ಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದು, ಸೋಮವಾರದಂದು ಪುತ್ತೂರಿನ ಪಡೀಲ್ ನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ರಾಜೇಂದ್ರ ಪ್ರಸಾದ ಅಗಲಿದ್ದಾರೆ.