ಸವದತ್ತಿ : ಮನೆಯ ಛಾವಣಿ ಕುಸಿದು ಮಹಿಳೆಯೊಬ್ಬರು ಮೃತರಾದ ಘಟನೆ ಸವದತ್ತಿ ತಾಲ್ಲೂಕಿನ ಕರಿಕಟ್ಟಿ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.
ಮೃತ ಮಹಿಳೆಯನ್ನು 70 ವರುಷದ ಶಾಂತವ್ವ ಶಿವಮೂರ್ತೆಪ್ಪ ಹಿರೇಮಠ ಎಂದು ಗುರುತಿಸಲಾಗಿದೆ. ಬೆಳಿಗ್ಗೆ 7.30 ರ ಸುಮಾರಿಗೆ ಶಾಂತವ್ವ ಅವರು ಗೃಹ ಕೆಲಸದಲ್ಲಿ ನಿರತರಾಗಿದ್ದಾಗ ಮನೆಯ ಮೊದಲನೇ ಕೊಠಡಿಯ ಮೇಲಿನ ಛಾವಣಿಯ ಸ್ವಲ್ಪ ಭಾಗದ ಮಣ್ಣು, ಕಲ್ಲು, ಕಟ್ಟಿಗೆ ಅವರ ಮೇಲೆ ಬಿದ್ದು ಅವರು ಹೂತು ಹೋಗಿದ್ದಾರೆ.
ಸವದತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.