ಹೊಸದಿಲ್ಲಿ: ಹುಬ್ಬಳ್ಳಿ ಮೂಲದ ಮಹಿಳೆಯೊಬ್ಬರು ದೆಹಲಿಯ ಇಂದಿರಾ ಗಾಂಧಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
ಟರ್ಮಿನಲ್ – 3 ರಲ್ಲಿ ಗರ್ಭಿಣಿಗೆ ನೋವು ಕಾಣಿಸಿಕೊಂಡು ಅಲ್ಲಿಯೇ ಜನ್ಮ ಕೊಟ್ಟಿದ್ದಾರೆ. ವಿಮಾನ ನಿಲ್ದಾಣದಲ್ಲೇ ಇದ್ದ ತುರ್ತು ಚಿಕಿತ್ಸಾ ಕೇಂದ್ರಕ್ಕೆ ತಾಯಿ ಮಗುವನ್ನು ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಟರ್ಮಿನಲ್ 3 ರಲ್ಲಿ ಕರ್ನಾಟಕ ಮೂಲದ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಕಿರಿಯ ಪ್ರಯಾಣಿಕರಿಗೆ ಸ್ವಾಗತ ಕೋರಲಾಗುವುದು. ನಿಲ್ದಾಣದಲ್ಲಿ ಮಗು ಜನಿಸಿರುವುದು ಇದೇ ಮೊದಲು ಎಂದು ವಿಮಾನ ನಿಲ್ದಾಣದ ಟ್ವಿಟರ್ ಖಾತೆಯಲ್ಲಿ ಬರೆಯಲಾಗಿದೆ.
ವಿಮಾನ ನಿಲ್ದಾಣದಲ್ಲಿ ಮೆದಾಂತ್ ಎಂಬ ತುರ್ತು ಚಿಕಿತ್ಸಾ ಘಟಕವಿದ್ದು, ಫೋರ್ಟಿಸ್ ಗ್ರುಪ್ನಿಂದ ಆಸ್ಪತ್ರೆಗಳಲ್ಲಿ ಸಿಗುವ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸಲಾಗಿದೆ.