ಸಿಂದಗಿ : ಬಾವಿಯಲ್ಲಿ ಈಜು ಕಲಿಯುತ್ತಿದ್ದ 17 ವರ್ಷದ ಯುವಕನೊಬ್ಬ ಮುಳುಗಿ ಅಸುನೀಗಿದ ಘಟನೆ
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಮೊರಟಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರವೀಣ ಗೊಂದಳಿ ಎಂಬವ ಮೃತರಾದವರು.
ಮೊರಟಗಿ ಗ್ರಾಮದ ಬಾಬುಗೌಡ ಜಗಶೆಟ್ಟಿ ಎಂಬುವರ ಬಾವಿಯಲ್ಲಿ ಈಜು ಕಲಿಯಲು ಸ್ನೇಹಿತರೊಂದಿಗೆ ಪ್ರವೀಣ ತೆರಳಿದ್ದ. ಸ್ನೇಹಿತರು ಪ್ರವೀಣನನಿಗೆ ಈಜು ಕಲಿಸುತ್ತ ತಾವೂ ಈಜುತ್ತಿದ್ದರು. ಆಗ ಏಕಾಏಕಿ ಪ್ರವೀಣ ನೀರಿನಲ್ಲಿ ಮುಳುಗಿದ್ದಾನೆ. ಸ್ನೇಹಿತರು ನೀರಿನ ಆಳಕ್ಕಿಳಿದು ಹುಡುಕಿದರೂ ತಕ್ಷಣ ಪ್ರವೀಣ ಸಿಗಲಿಲ್ಲ. ನಂತರ ಸ್ವಲ್ಪ ಹೊತ್ತಿನಲ್ಲಿ ಆತನನ್ನು ಹುಡುಕಿ ಮೇಲೆ ತೆಗೆದುಕೊಂಡು ಬಂದಾಗ ಆತ ಕೊನೆಯುಸಿರೆಳೆದಿದ್ದ.
ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.