ಬೆಂಗಳೂರು: ವಾಟ್ಸಪ್ ಚಾಟಿಂಗ್ ಮೂಲಕ ಯುವಕನಿಗೆ ಪರಿಚಯಗೊಂಡ ಯುವತಿಯೊಬ್ಬಳು ಮನೆಯಲ್ಲಿ ಯಾರೂ ಇಲ್ಲವೆಂದು ಹೇಳಿ ಕರೆಸಿಕೊಂಡು ಖಾಸಗಿ ವಿಡಿಯೋ ಚಿತ್ರಣ ಮಾಡಿಕೊಂಡು ಬ್ಲ್ಯಾಕಮೇಲ್ ಮಾಡಿರುವ ಘಟನೆ ನಗರದ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ.
ಪ್ರಿಯಾ ಎಂಬ ಯುವತಿಗೆ ದಿಲೀಪಕುಮಾರ ಎಂಬ ಯುವಕ ಸಿಕ್ಕಿಹಾಕಿಕೊಂಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲ ಎಂದು ದಿಲೀಪನನ್ನು ಮನೆಗೆ ಯುವತಿ ಕರೆದಿದ್ದಾಳೆ. ಆತ ಮನೆಗೆ ಬಂದ ಬಳಿಕ ಯುವತಿ ಜೊತೆ ಇನ್ನೂ ನಾಲ್ವರು ಹುಡುಗರ ಗುಂಪು ಇತ್ತು. ನಂತರ ಅಲ್ಲಿದ್ದ ಯುವಕರು ಯುವತಿಯೊಂದಿಗೆ ದಿಲೀಪನ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬಳಿಕ ಸುಲಿಗೆ ಮಾಡಿದ್ದಾರೆ.
ಅಲ್ಲದೇ ಯುವತಿಯ ಜೊತೆಗಿದ್ದ ಗುಂಪು ದಿಲೀಪಗೆ ಚಾಕು ಹಿಡಿದು ಹೆದರಿಸಿ ಆತನ ಬಳಿ ಇದ್ದ 25 ಸಾವಿರ ಹಣ, ಮೊಬೈಲ್, ಕಾರ್ ಕಿಯನ್ನು ಕಸಿದುಕೊಂಡಿದ್ದಾರೆ. ಕಾರ್ ಕಿ ವಾಪಸ್ ಕೊಡಬೇಕೆಂದರೆ 60 ಸಾವಿರ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಯುವತಿಯಿಂದ ವಂಚನೆಗೊಳಗಾದ ದಿಲೀಪ ಈಗ ಸುದ್ದಗುಂಟೆ ಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ. ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.