ಹೊಸದಿಲ್ಲಿ, ೧೫- ಮಗುವಿನ ಜನನ ಪ್ರಮಾಣ ಪತ್ರದ ಜೊತೆ ಆಧಾರ ಕಾರ್ಡ ನೀಡುವ ಯೋಜನೆ ಶೀಘ್ರದಲ್ಲೇ ಕೆಲವೇ ತಿಂಗಳಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲೂ ಜಾರಿಗೆ ಬರಲಿದೆ.
ಈಗಾಗಲೇ 16 ರಾಜ್ಯಗಳಲ್ಲಿ ಜನನ ಪ್ರಮಾಣ ಜೊತೆಗೆ ಆಧಾರ ಜೋಡಿಸುವ ಯೋಜನೆ ಚಾಲ್ತಿಯಲ್ಲಿದೆ. ಕಳೆದ ಒಂದು ವರ್ಷದಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನು ಕೆಲವೇ ತಿಂಗಳಲ್ಲಿ ದೇಶದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗಲಿದೆ.
ಜನನ ಪ್ರಮಾಣ ಪತ್ರದ ಜೊತೆ ಆಧಾರ ಜೋಡಣೆಯಿಂದ ಸರಕಾರಗಳ ಯೋಜನೆಗಳು ಪೋಷಕರಿಗೆ ನೇರವಾಗಿ ತಲುಪಿಸಲಾಗುವುದು. ಅಲ್ಲದೇ 5 ವರ್ಷದವರೆಗೂ ಮಕ್ಕಳಿಗೆ ಬಯೋಮೆಟ್ರಿಕ್ ಇರುವುದಿಲ್ಲ. ಆದರೆ ಆಸ್ಪತ್ರೆಗಳಲ್ಲಿ ನೀಡುವ ವಿವರಗಳನ್ನು ಆಧರಿಸಿ ಆಧಾರ ಕಾರ್ಡ ನೀಡಲಾಗುವುದು.
ಮಗು ಜನಿಸಿದ 5 ವರ್ಷಗಳ ವರೆಗೆ ತಂದೆ-ತಾಯಿ ಜೊತೆ ಇರುವ ಮಗುವಿನ ಸಾಂದರ್ಭಿಕ ಚಿತ್ರ ಬಳಸಿ ಆಧಾರ ಸಂಖ್ಯೆ ನೀಡಲಾಗುತ್ತದೆ. ಮಗು 5ರಿಂದ 15 ವರ್ಷ ಆಗುವಷ್ಟರಲ್ಲಿ ಬೆರಳಚ್ಚು ಮುಖ ಸಮರ್ಪಕವಾಗಿ ಬೆಳೆದಿರುರತ್ತದೆ. ಆಗ ಬಯೋಮೆಟ್ರಿಕ್ ಮೂಲಕ ಮಾಹಿತಿ ಪಡೆಯಲಾಗುತ್ತಿದೆ.
ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರಗಳ 1000ಕ್ಕೂ ಅಧಿಕ ಯೋಜನೆಗಳು ಆಧಾರ್ ಕಾರ್ಡ್ ಜೋಡಣೆಯೊಂದಿಗೆ ನೀಡಲಾಗುತ್ತಿದೆ. 650 ಯೋಜನೆಗಳು ರಾಜ್ಯ ಸರಕಾರ ಹಾಗೂ 315 ಕೇಂದ್ರ ಸರಕಾರದ ಯೋಜನೆಗಳಿವೆ. ಇಲ್ಲಿಯವರೆಗೆ ಸುಮಾರು 135 ಕೋಟಿ ಆಧಾರ್ ಕಾರ್ಡ ವಿತರಿಸಲಾಗಿದೆ. 4ರಿಂದ 20 ಕೋಟಿಯವರೆಗೆ ಹೊಸ ಆಧಾರ್ ಸಂಖ್ಯೆಗಳು ಸೇರ್ಪಡೆ ಆಗುತ್ತಿವೆ.