ಹೊಸದಿಲ್ಲಿ: ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು ಅಂಥ ಸುಪ್ರೀಮ ಕೋರ್ಟ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಮಹಿಳೆಯರು ವಿವಾಹಿತರಾಗಿರಲಿ ಅಥವಾ ಅವಿವಾಹಿತರಾಗಿರಲಿ, ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರಾಗಿದ್ದಾರೆ ಅಂತ ಸುಪ್ರೀಮ ಕೋರ್ಟ ಹೇಳಿದೆ.
ಇದೇ ವೇಳೆ ನ್ಯಾಯಪೀಠವು ಗಂಡಂದಿರಿಂದ ಲೈಂಗಿಕ ದೌರ್ಜನ್ಯವು ಅತ್ಯಾಚಾರದ ರೂಪವನ್ನು ತೆಗೆದುಕೊಳ್ಳಬಹುದು, ಮತ್ತು ಅತ್ಯಾಚಾರದ ಅರ್ಥವು ಎಂಟಿಪಿ ಕಾಯ್ದೆ ಮತ್ತು ಗರ್ಭಪಾತದ ಉದ್ದೇಶಗಳಿಗಾಗಿ ನಿಯಮಗಳ ಅಡಿಯಲ್ಲಿ ವೈವಾಹಿಕ ಅತ್ಯಾಚಾರದ ಅರ್ಥವನ್ನು ಒಳಗೊಂಡಿರಬೇಕು ಎಂದು ಸುಪ್ರೀಮ ಕೋರ್ಟ ತೀರ್ಪು ನೀಡಿದೆ.
ಅವಿವಾಹಿತ ಮಹಿಳೆಯೂ ವಿವಾಹಿತ ಮಹಿಳೆಯರಿಗೆ ಸರಿಸಮನಾಗಿ 24 ವಾರಗಳ ವರೆಗೆ ಗರ್ಭಪಾತಕ್ಕೆ ಒಳಗಾಗಬಹುದು ಎಂದು ಘೋಷಿಸಲು ಕೋರ್ಟ ಆದೇಶಿಸಿದೆ.