ಒಂದು ತಿಂಗಳು ಜಾಗರಾಣೆ ಮಾಡಿ ಕೊನೆಗೂ ಕಳ್ಳರನ್ನು ಹಿಡಿದ ಜನ!

A B Dharwadkar
ಒಂದು ತಿಂಗಳು ಜಾಗರಾಣೆ ಮಾಡಿ ಕೊನೆಗೂ ಕಳ್ಳರನ್ನು ಹಿಡಿದ ಜನ!

ಧಾರವಾಡ : ಸುಮಾರು ಒಂದು ತಿಂಗಳಿಂದ ಕಳ್ಳರನ್ನು ಹಿಡಿಯಲು ರಾತ್ರಿ ಇಡೀ ಹೊಂಚು ಹಾಕಿ ಕುಳಿತುಕೊಳ್ಳುತ್ತಿದ್ದ ಮಾಳಮಡ್ಡಿಯ ಜನರು ರವಿವಾರ ತಮ್ಮ ಯೋಜನೆಯಲ್ಲಿ ಸಫಲರಾಗಿದ್ದಾರೆ. ಕಳ್ಳತನಕ್ಕೆ ಬಂದಿದ್ದ ಮೂವರಲ್ಲಿ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಮಾಳಮಡ್ಡಿಯಲ್ಲಿ ಕಳ್ಳತನ ಹೆಚ್ಚಾಗಿತ್ತು. ಅಪಾರ್ಟ್ಮೆಂಟ್​​​‌ಗಳಲ್ಲಿನ ಮನೆಗಳಿಗೂ ಸಹ ಕಳ್ಳರು ಕನ್ನ ಹಾಕುತ್ತಿದ್ದರು. ಪೊಲೀಸರು ಗಸ್ತು ಮಾಡುತ್ತಿದ್ದರೂ ಜನ ಹಲವು ಗುಂಪುಗಳನ್ನು ಮಾಡಿಕೊಂಡು ಅಲ್ಲಲ್ಲಿ ಹೊಂಚು ಹಾಕಿ ಇಡೀ ರಾತ್ರಿ ಕಾಯುತ್ತಿದ್ದರು. ಆದರೂ ಕಳ್ಳತನ ನಡೆಯುತ್ತಿದ್ದವು. ರಾತ್ರಿ ‌ಹೊತ್ತು ತಿರುಗಾಡುವವರ ಮೇಲೆ ಕಣ್ಣಿಟ್ಟು ಕಾಯುತ್ತಿದ್ದರು.

ನಸುಕಿನ ಜಾವ ಕಳ್ಳರು ಬರುತ್ತಿದ್ದಂತೆಯೇ ಹೊಂಚು ಹಾಕಿ ಕಾಯುತ್ತಿದ್ದ ಜನರು ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಬ್ಬರಲ್ಲಿ ಓರ್ವ ಕಳ್ಳ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಪೊಲೀಸರು ಆ ಕಳ್ಳರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ಕಳ್ಳರ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿದ್ಯಾಗಿರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.