“ಅಗ್ನಿವೀರ ವಾಯು” ಯುವಕರನ್ನು ವೃತ್ತಿಪರ, ಸಮರ್ಥ, ಭವಿಷ್ಯದ ಶಿಸ್ತಿನ ಸಿಪಾಯಿಯನ್ನಾಗಿ ಪರಿವರ್ತಿಸುತ್ತದೆ -ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್

A B Dharwadkar
“ಅಗ್ನಿವೀರ ವಾಯು” ಯುವಕರನ್ನು ವೃತ್ತಿಪರ, ಸಮರ್ಥ, ಭವಿಷ್ಯದ ಶಿಸ್ತಿನ ಸಿಪಾಯಿಯನ್ನಾಗಿ ಪರಿವರ್ತಿಸುತ್ತದೆ -ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಬೆಳಗಾವಿ, ೩೦- ಅಗ್ನಿವೀರವಾಯು ಯುವಕರನ್ನು ವೃತ್ತಿಪರ, ಸಮರ್ಥ, ಚುರುಕುಬುದ್ಧಿಯ, ದೈಹಿಕವಾಗಿ ಕಠಿಣ ಮತ್ತು ಭವಿಷ್ಯದ ಶಿಸ್ತಿನ ಯೋಧರನ್ನಾಗಿ ಪರಿವರ್ತಿಸುತ್ತದೆ ಎಂದು ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ಹೇಳಿದ್ದಾರೆ.

ಬೆಳಗಾವಿಯ ಏರಮೆನ್ ತರಬೇತಿ ಶಾಲೆಯಲ್ಲಿ (ಎಟಿಎಸ್) ‘ಅಗ್ನಿವೀರ ವಾಯು’ವಿನ ಮೊದಲ ಬ್ಯಾಚ್ ನ ತರಬೇತಿಯು ಇಂದಿನಿಂದ ಆರಂಭವಾಗಿದ್ದು ಈ ಐತಿಹಾಸಿಕ ದಿನದ ಅಂಗವಾಗಿ, ತರಬೇತಿ ಕಮಾಂಡ್ ನ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಅವರು ಬೆಳಗಾವಿ ಎಟಿಎಸ್ ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹೊಸದಾಗಿ ಅಗ್ನಿವೀರ ವಾಯು ಬ್ಯಾಚ್ ಗೆ ನೇಮಕಗೊಂಡವರನ್ನು ಉದ್ದೇಶಿಸಿ ಮಾತನಾಡಿದರು.

ಏರ್ ಮಾರ್ಷಲ್ ಅವರು ತಮ್ಮ ಭಾಷಣದಲ್ಲಿ, ಅಗ್ನಿಪಥ ಯೋಜನೆಯ ಪ್ರಮುಖಾಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ನೀವು ಇಲ್ಲಿಂದೀಚೆಗೆ ಐಎಎಫ್ ನಲ್ಲಿ ಅದ್ಭುತ ಪಯಣವನ್ನು ಆರಂಭಿಸುತ್ತಿದ್ದೀರಿ ಎಂದು ಹೇಳಿದರು.

22 ವಾರಗಳ ಕಠಿಣ ತರಬೇತಿಯ ನಂತರ, ಯುವ ಅಗ್ನಿವೀರ ವಾಯುಗಳು ತಾಂತ್ರಿಕ ಪರಿಣತಿ ಮತ್ತು ಯುದ್ಧಕ್ಕೆ ಸನ್ನದ್ಧವಾದ ವಾಯು ಯೋಧರಾಗಿ ರೂಪಾಂತರಗೊಳ್ಳುತ್ತಾರೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಅಗ್ನಿವೀರವಾಯು ದೇಶಾದ್ಯಂತ ವಿವಿಧ ವಲಯ ಕೇಂದ್ರಗಳಿಗೆ ನಿಯೋಜನೆ ಮಾಡಲಾಗುವುದು, ಅದರಲ್ಲಿ ಅವರು ನುರಿತ ಮತ್ತು ಅನುಭವಿ ವಾಯು ಯೋಧರ ನೇರ ಮೇಲ್ವಿಚಾರಣೆಯಲ್ಲಿ ಲಭ್ಯವಿರುವ ಐಎಎಫ್ ಯಂತ್ರೋಪಕರಣ ಮತ್ತು ತಂತ್ರಜ್ಞಾನಕ್ಕೆ ಕ್ರಮೇಣ ಒಗ್ಗಿಕೊಳ್ಳುತ್ತಾರೆ ಎಂದು ಅವರು ಹೇಳಿದರು.

ಭಾರತೀಯ ವಾಯುಪಡೆಯನ್ನು ಜಗತ್ತಿನ ಅತ್ಯಂತ ಬಲಿಷ್ಠ ವಾಯುಪಡೆಗಳಲ್ಲಿ ಒಂದಾಗಿ ಮುಂದುವರಿಸಿಕೊಳ್ಳಲು ವೃತ್ತಿಪರತೆಯಲ್ಲಿ ಶ್ರೇಷ್ಠ ಗುಣಮಟ್ಟವನ್ನು ಪ್ರದರ್ಶಿಸಬೇಕು ಎಂದು ಅವರು ಯುವ ಯೋಧರಿಗೆ ಸಲಹೆ ನೀಡಿದರು.

ಎಲ್ಲಾ ವಾಯು ಯೋಧರು ನಡೆಸಿದ ಸಮಗ್ರ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, “ಐತಿಹಾಸಿಕ ಸೇರ್ಪಡೆ ಯೋಜನೆಯನ್ನು ಯಶಸ್ವಿಗೊಳಿಸಲು, ಭಾರತ ಸರ್ಕಾರದಿಂದ ಯೋಜನೆಯನ್ನು ಅಧಿಕೃತವಾಗಿ ಆರಂಭಿಸಿದ ನಂತರ ನೀಲಿ ಬಣ್ಣದ ಧಿರಿಸಿನ ಪುರುಷರು ಮತ್ತು ಮಹಿಳೆಯರು ಶ್ರಮಿಸುತ್ತಿದ್ದಾರೆ. ಈ ಸಮಯದಲ್ಲಿ, ಐಎಎಫ್ ರಾಷ್ಟ್ರದ ಅದಮ್ಯ ವಾಯುಪಡೆಯ ಕಾರ್ಯಾಚರಣೆಯ ಬಲವನ್ನು ವೃದ್ಧಿಸಲು ಅಪಾರ ಸಾಮರ್ಥ್ಯದ ಈ ಅಗ್ನಿವೀರವಾಯುಗಳನ್ನು ಪ್ರಬಲ ಶಸ್ತ್ರಾಗಾರದಲ್ಲಿ ಸೇರಿಸಿಕೊಳ್ಳಲು ಸಿದ್ಧವಿದೆ” ಎಂದು ಅವರು ಹೇಳಿದರು.

ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಹೊಸದಾಗಿ ನೇಮಕಗೊಂಡ ಅಗ್ನಿವೀರವಾಯು ಯೋಧರಿಗೆ ಶಿಸ್ತು, ನೈರ್ಮಲ್ಯ, ದೈಹಿಕ ಮತ್ತು ಮಾನಸಿಕ ಸಹನಾಶಕ್ತಿಯ ಮಹತ್ವವನ್ನು ಒತ್ತಿ ಹೇಳಿದರು.

ತಮ್ಮ ಸಮಾರೋಪ ಭಾಷಣದಲ್ಲಿ ಅವರು ಐಎಎಫ್ ನ ಭವಿಷ್ಯವನ್ನು ರೂಪಿಸುವಲ್ಲಿ ಬೋಧಕರ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.