ಬೆಳಗಾವಿ:. ಕನ್ನಡಿಗರೇ ಹೆಚ್ಚಾಗಿರುವ ಅಕ್ಕಲಕೋಟ, ಜತ್ತ ಹಾಗೂ ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದ ಕನ್ನಡಿಗರು ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಮಹಾರಾಷ್ಟ್ರದ ಜತ್ತ ತಾಲೂಕಿನ ಕನ್ನಡ ಹೋರಾಟಗಾರ ಮಹದೇವ ಅಂಕಲಗಿ ಅವರು, 44 ಹಳ್ಳಿಗಳ ಪರ ಮುಖ್ಯಮಂತ್ರಿಯವರು ಮಾತನಾಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮಹಾಜನ ವರದಿ ಪ್ರಕಾರ ಜತ್ತ ತಾಲೂಕಿನ 44 ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕು. ನಾವು ಮಹಾರಾಷ್ಟ್ರದಲ್ಲಿದ್ದರೂ ನಮ್ಮ ಮೇಲೆ ಪ್ರೇಮ ತೋರಿಸಿದ್ದೀರಿ ಎಂದಿದ್ದಾರೆ.
ಗಡಿ ಭಾಗದಲ್ಲಿ ಕನ್ನಡಿಗರ ಅಭಿವೃದ್ಧಿಗೆ ಅನುದಾನ ನೀಡಿರುವುದಕ್ಕೆ ಆಭಾರಿಯಾಗಿದ್ದೇವೆ. ಜತ್ ತಾಲೂಕು ಯಾವಾಗಲೂ ತೀವ್ರ ಬರಗಾಲದಲ್ಲಿಯೇ ಇದೆ. ಸರ್ಕಾರ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿದೆ ಎಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.