ಆನಲೈನ್ ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಇಂಜಿನೀಯರಿಂಗ ವಿದ್ಯಾರ್ಥಿ

A B Dharwadkar
ಆನಲೈನ್ ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಇಂಜಿನೀಯರಿಂಗ ವಿದ್ಯಾರ್ಥಿ

ಹುಬ್ಬಳ್ಳಿ: ಆನಲೈನ್ ಗೇಮ್‌ ನಲ್ಲಿ ಹಣ ಕಳೆದುಕೊಂಡಿದ್ದ ವಿಜಯಪುರ ಜಿಲ್ಲೆ ಮೂಲದ ಇಂಜನಿಯರಿಂಗ ವಿದ್ಯಾರ್ಥಿಯೊಬ್ಬ ಬುಧವಾರ ತಡರಾತ್ರಿ ತಾನು ವಾಸಿಸುತ್ತಿದ್ದ ಇಲ್ಲಿನ ಶಿರಡಿ ನಗರದ ಬಿಸಿಎಂ ಹಾಸ್ಟೆಲ್‌ನ ಕೊಠಡಿಯಲ್ಲೇ ನೇಣಿಗೆ ಶರಣಾಗಿದ್ದಾನೆ.

ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ರಾಕೇಶ ಶ್ರೀಶೈಲ ಜಂಬಲದಿನ್ನಿ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಇಲ್ಲಿನ ವಿದ್ಯಾನಗರ ಬಿವಿಬಿ ಇಂಜನಿಯರಿಂಗ್ ಕಾಲೇಜಿನಲ್ಲಿ ಬಿಇ  “ಇ ಆ್ಯಂಡ್ ಸಿ” ವಿಭಾಗದಲ್ಲಿ 6ನೇ ಸೆಮಿಸ್ಟರ್ ಓದುತ್ತಿದ್ದ ಈತನು ಆನಲೈನ್‌ ಗೇಮ್‌ ವ್ಯಾಮೋಹಕ್ಕೊಳಗಾಗಿದ್ದ.‌ ಇದರಲ್ಲಿ ಹಣ ಕೂಡ ಕಳೆದುಕೊಂಡಿದ್ದ. ಇದರಿಂದ ಮನನೊಂದು ಕೊಠಡಿಯಲ್ಲಿನ ಫ್ಯಾನ್‌ ಗೆ ನೇಣು ಹಾಕಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ ಎನ್.  ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಯುವಕನ ಪಾಲಕರು ಹಾಸ್ಟೆಲ್‌ಗೆ ಆಗಮಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.