Please assign a menu to the primary menu location under menu

Local News

ಬೆಳಗಾವಿಯಲ್ಲಿ ನೆಲಕ್ಕೆ ಉರುಳಿದ ಮತ್ತೊಂದು ಬೃಹತ್ ಮರ : ವಾಹನಗಳು ಜಖಂ 


ಬೆಳಗಾವಿ: ನಗರದ ಇಲ್ಲಿನ ಹಳೇ ಪಿ.ಬಿ. ರಸ್ತೆಯಲ್ಲಿ ಬೃಹತ್‌ ಮರ ನೆಲಕ್ಕೆ ಉರುಳಿ ಬಿದ್ದಿದ್ದರಿಂದ ಎರಡು ಆಟೋ ರಿಕ್ಷಾ ಮತ್ತು ಇನ್ನೋವಾ ಕಾರಿಗೆ ಜಖಂ ಆಗಿದೆ. ಇದೇ ಮಾರ್ಗವಾಗಿ ಹೊರಟಿದ್ದ ಸರ್ಕಾರಿ ಬಸ್‌ ಅನಾಹುತದಿಂದ ಪಾರಾಗಿದೆ.

ಮೊನ್ನೆ ದಿ. ೧೩ ರಂದು ಆರ್ ಟಿ ಓ ಕಚೇರಿ ಸಮೀಪ ಬೈಕ್ ಮೇಲೆ ಮರ ಬಿದ್ದು ಓರ್ವ ಅಸು ನೀಗಿದ್ದರು ಮತ್ತು ಇನ್ನೊಬ್ಬರು ಗಾಯಗೊಂಡಿದ್ದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಕೇಂದ್ರೀಯ ಬಸ್‌ ನಿಲ್ದಾಣದಿಂದ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಆದರೆ, ಬೃಹತ್ ಮರ ಬಿದ್ದು ಅದೃಷ್ಟವಷಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಸ್ತೆಬದಿ ನಿಲ್ಲಿಸಲಾಗಿದ್ದ ವಾಹನಗಳಿಗಷ್ಟೇ ಹಾನಿಯಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ರಸ್ತೆ ಮೇಲೆ ಬಿದ್ದಿದ್ದ ಮರ ತೆರವು ಕಾರ್ಯಾಚರಣೆ ನಡೆಸಿದರು.

 


Samadarshi News

Leave a Reply