ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತೊಂದು ಸುತ್ತಿನ ಅಭಿಯಾನ ನಡೆಸಿದೆ. ವಿಭಿನ್ನ ರೀತಿಯಲ್ಲಿ 40% ಕಮಿಷನ್ ಸರ್ಕಾರದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ರೋಡಲ್ಲಿ ಯಮಗುಂಡಿ, ಬಿದ್ರೆ ಜೀವನ ಬಂಡಿ ಪೋಸ್ಟರ್ ಬಿಡುಗಡೆ ಮಾಡಿದ್ದು, ಪೋಸ್ಟರ್ ನಲ್ಲಿ ಮುಖ್ಯಮಂತ್ರಿಯನ್ನು ಯಮನಂತೆ ಬಿಂಬಿಸಿದೆ. ಈ ಮೂಲಕ ವಿವಿಧ ಚಿತ್ರಗಳ ಮೂಲಕ ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಅಭಿಯಾನ ನಡೆಸಿದೆ.
ಮತ್ತೊಂದು ಪೋಸ್ಟರ್ ನಲ್ಲಿ ಕಿಲಾಡಿ ಜೋಡಿ ಎಂದು ಬೊಮ್ಮಾಯಿ ಹಾಗೂ ಸಚಿವ ಅಶ್ವತ್ಥನಾರಾಯಣ ಅವರ ಪೋಸ್ಟರ್, ಸರ್ವರ್ ಸೋಮಣ್ಣ ಹೆಸರಲ್ಲಿ ಸಚಿವ ಸೋಮಣ್ಣ, ಚಪಲ ಚನ್ನಿಗರಾಯ ಎಂದು ರಮೇಶ ಜಾರಕಿಹೊಳಿ ಪೋಸ್ಟರ್, ಅಡುಗೆ ಭಟ್ಟರಂತೆ ಸಚಿವ ಬಿ.ಸಿ.ನಾಗೇಶ ಪೋಸ್ಟರ್ ಪ್ರಕಟಿಸಿದೆ. ಈ ಮೂಲಕ ಕಾಂಗ್ರೆಸ್ ವಿಭಿನ್ನ ರೀತಿಯ ಪೋಸ್ಟರ್ ಅಭಿಯಾನದ ಮೂಲಕ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಅಣಕವಾಡಿದೆ.