ನಾಗಪುರ: ಪ್ರಿಯಕರನ ಪತ್ನಿ ಮತ್ತು ಆತನ ಮಗುವಿನ ಮೇಲೆ ಯುವತಿಯೊಬ್ಬಳು ಆ್ಯಸಿಡ್ ಎರಚಿರುವ ಭಯಾನಕ ಘಟನೆ ನಾಗಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 25 ವರ್ಷದ ಯುವತಿಯನ್ನು ಬಂಧಿಸಲಾಗಿದೆ.
ತಾನು ಸಂಬಂಧ ಹೊಂದಿದ್ದ ಯುವಕನಿಗೆ ಇದಾಗಲೇ ಮದುವೆಯಾಗಿ ಮಗುವು ಇದೆ ಎಂದು ತಿಳಿದ ಯುವತಿ ಇಂಥದ್ದೊಂದು ಹೀನ ಕಾರ್ಯ ಮಾಡಿದ್ದಾಳೆ.
ಇದೇ ವಿಷಯವಾಗಿ ಆತನ ಪತ್ನಿ ಮತ್ತು ಆರೋಪಿ ಯುವತಿಯ ನಡುವೆ ಜಗಳವಾಗುತ್ತಿತ್ತು. ಆತ ತನ್ನ ಪ್ರಿಯಕರನಾಗಿದ್ದು, ದೂರ ಇರುವಂತೆ ಪತ್ನಿಗೇನೇ ಉಲ್ಟಾ ಈಕೆ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಆದರೆ ಇದಾಗಲೇ ಮದುವೆಯಾಗಿರುವ ಕಾರಣ ಪತ್ನಿ ಕೂಡ ಜಗಳ ಮಾಡಿದ್ದಳು. ಇದರಿಂದ ಪ್ರಿಯಕರನ ಜತೆಗೂಡಿ ಯುವತಿ ಇಂಥದ್ದೊಂದು ಸಂಚು ರೂಪಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ತಾಯಿ ಮತ್ತು ಮಗುವಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆ್ಯಸಿಡ್ ಎರಚಿ ಪರಾರಿಯಾದ ಯುವತಿಯನ್ನು ಮೊಬೈಲ್ ಫೋನ್ ಮತ್ತು ಮತ್ತು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಬಂಧಿಸಲಾಗಿದೆ.