ಏಷ್ಯಾ ಕಪ್‌ : ಸಿರಾಜ್, ಕೆ.ಎಲ್‌.ರಾಹುಲ್, ಪ್ರಸಿದ್ಧ ಕೃಷ್ಣಗಿಲ್ಲ ಸ್ಥಾನ!

A B Dharwadkar
ಏಷ್ಯಾ ಕಪ್‌ : ಸಿರಾಜ್, ಕೆ.ಎಲ್‌.ರಾಹುಲ್, ಪ್ರಸಿದ್ಧ ಕೃಷ್ಣಗಿಲ್ಲ ಸ್ಥಾನ!
ಮುಂಬೈ, ೧೯ : ಸೆಪ್ಟೆಂಬರ 9ರಿಂದ ಯುಎಇಯಲ್ಲಿ ಆರಂಭವಾಗಲಿರುವ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ 15 ಮಂದಿ ಆಟಗಾರರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಮೊಹಮ್ಮದ ಸಿರಾಜ,  ಕೆ.ಎಲ್‌.ರಾಹುಲ್ ಮತ್ತು ಪ್ರಸಿದ್ಧ ಕೃಷ್ಣ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಟಿ20 ತಂಡದ ನಾಯಕ ಸೂರ್ಯಕುಮಾರ ಯಾದವ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ಮುಂಬೈಯಲ್ಲಿ ಮಂಗಳವಾರ ನಡೆದ ಆಯ್ಕೆ ಮಂಡಳಿ ಸಭೆಯಲ್ಲಿ ಅಜಿತ ಅಗರಕರ ಅವರು ಭಾರತ ತಂಡವನ್ನು ಪ್ರಕಟಿಸಿದರು. ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದ್ದು ಬೌಲರ್ ಜಸಪ್ರೀತ ಬೂಮ್ರಾ ಕೂಡಾ ಸ್ಥಾನ ಪಡೆದಿದ್ದಾರೆ.

ಈಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ಅವರು ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಅಗರಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸ್ವದೇಶಿ ಟೆಸ್ಟ್ ಸರಣಿಗೆ ಬೂಮ್ರಾ ಲಭ್ಯತೆಯ ಬಗ್ಗೆ ಅನುಮಾನಗಳಿದ್ದವು. ಆದರೆ, ಆಯ್ಕೆದಾರರು ಬೂಮ್ರಾಗೆ ಮಣೆ ಹಾಕಿದ್ದು ಎಡಗೈ ಸ್ಪಿನ್ನರ್ ಕುಲದೀಪ ಯಾದವ ಅವರನ್ನು ಸಹ ಆಯ್ಕೆ ಮಾಡಲಾಗಿದೆ.

ಭಾರತ ತಂಡ : ಸೂರ್ಯಕುಮಾರ ಯಾದವ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ ಶರ್ಮಾ, ಹಾರ್ದಿಕ ಪಾಂಡ್ಯ, ಅಕ್ಷರ ಪಟೇಲ, ಜಸಪ್ರೀತ ಬೂಮ್ರಾ, ಜಿತೇಶ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ಅರ್ಷದೀಪ ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹರ್ಷಿತ ರಾಣಾ, ತಿಲಕ ವರ್ಮಾ, ರಿಂಕು ಸಿಂಗ್, ವರುಣ ಚಕ್ರವರ್ತಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.