ಲುಸೈಲ್: ರವಿವಾರ ನಡೆದ ಅತ್ಯಂತ ರೋಚಕ ವಿಶ್ವಕಪ್ ಫುಟಬಾಲ್ ಅಂತಿಮ ಪಂದ್ಯದ ವೇಳೆ ಅರ್ಜೆಂಟೀನಾದ ತರುಣಿಯೊಬ್ಬಳು ಕ್ರೀಡಾಂಗಣದಲ್ಲೇ ಬಟ್ಟೆ ಬಿಚ್ಚಿ ಟಾಪ್ ಲೆಸ್ ಆದ ಘಟನೆ ನಡೆಯಿತು.
ಫ್ರಾನ್ಸ ವಿರುದ್ದದ ರೋಚಕ ಹಣಾಹಣಿಯ ವೇಳೆ ಆರ್ಜೇಂಟಿನಾ ಪರ ಮೊಂಟಿಯೆಲ್ ಗೋಲು ಬಾರಿಸಿದ ನಂತರ ಮಹಿಳಾ ಅಭಿಮಾನಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದು , ಇದು ಟಿವಿ ಪರದೆಯ ಮೇಲೂ ಕಂಡು ಬಂತು. ಟಿವಿ ಕ್ಯಾಮರಾಗಳು ಅರ್ಜೆಂಟೀನಾ ಅಭಿಮಾನಿಗಳ ಸಂಭ್ರಮವನ್ನು ತೋರಿಸುವ ವೇಳೆ ಈಕೆಯ ಮೇರೆ ಮೀರಿದ ಸಂಭ್ರಮವೂ ಸೆರೆಯಾಗಿದೆ.
ಉತ್ಸಾಹದಲ್ಲಿ ಮೈಮರೆತಿದ್ದ ಮಹಿಳಾ ಅಭಿಮಾನಿಗೆ ಜೈಲು ಸೇರುವ ಭೀತಿ ಎದುರಾಗಿದೆ. ವಿಶ್ವಕಪ್ ಆರಂಭದ ಮುನ್ನವೇ ಸಂಪ್ರದಾಯವಾದಿ ಇಸ್ಲಾಮಿಕ್ ರಾಷ್ಟ್ರ ಕತಾರ್ ಮಹಿಳೆಯರ ಧಿರಿಸುಗಳಿಗೆ ಸಂಬಂಧಿಸಿ ಕೆಲವೊಂದು ನಿಯಮಗಳನ್ನು ಕಡ್ಡಾಯ ಮಾಡಿತ್ತು. ವಿಶ್ವದ ಹಲವು ರಾಷ್ಟ್ರಗಳ ಅಭಿಮಾನಿಗಳು ಪಾಲ್ಗೊಳ್ಳುವ ಪಂದ್ಯಾವಳಿಯಲ್ಲಿ ಪುರುಷರು ಮತ್ತು ಮಹಿಳೆಯರು ತಮ್ಮ ಭುಜಗಳು ಮತ್ತು ಮೊಣಕಾಲುಗಳನ್ನು ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಿತ್ತು. ಸ್ಥಳೀಯ ಸಂಸ್ಕೃತಿಗೆ ಗೌರವವನ್ನು ತೋರಿಸಬೇಕು. ಆ ದೇಶದ ನಿಯಮಗಳನ್ನು ಉಲಂಘನೆ ಮಾಡಿದರೆ ಭಾರಿ ದಂಡ ಅಥವಾ ಜೈಲು ವಿಧಿಸುವುದಾಗಿ ಕತಾರ್ ಪ್ರವಾಸೋದ್ಯಮ ಪ್ರಾಧಿಕಾರವು ಹೇಳಿತ್ತು.
ಟಿವಿ ಸಂದರ್ಶನದಲ್ಲಿ ಕ್ರೊಯೇಷಿಯಾ ಫುಟ್ಬಾಲ್ ಅಭಿಮಾನಿ, ಮಾಡೆಲ್ ಇವಾನಾ ನಾಲ್ ಅವರೂ ಹಾಟ್ ಅವತಾರದಲ್ಲಿ ಕಾಣಿಸಿ ಸುದ್ದಿಯಾಗಿ ಕತಾರ್ ನಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದರು.