ಬೆಳಗಾವಿ 4- ಪ್ರಶಸ್ತಿ ಪುರಸ್ಕಾರಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಗಡಿಭಾಗವಾದ ಬೆಳಗಾವಿಯಲ್ಲಿ ಕನ್ನಡ ಭಾಷೆ ಉಳಿಸುವ ಬೆಳೆಸುವ ಕಾರ್ಯವಾಗಬೇಕಿದೆ. ಈ ಕುರಿತಂತೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ಕನ್ನಡ ಲೇಖಕರಿಗೆ, ಪ್ರಕಾಶಕರಿಗೆ, ಸಮಾಜ ಸೇವಕರಿಗೆ ಪ್ರಶಸ್ತಿಗಳನ್ನು ನೀಡುವುದರ ಮೂಲಕ ಪ್ರೋತ್ಸಾಹಿಸುತ್ತ ಬಂದಿದೆ ಎಂದು ಖ್ಯಾತ ಹೃದಯರೋಗ ತಜ್ಞ ಡಾ. ಮಹಾದೇವ ಡಿ. ದೀಕ್ಷಿತ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದವರು 2022 ಮತ್ತು 2023 ನೇ ಸಾಲಿನ ಸಿರಿಗನ್ನಡ ಗೌರವ ಪ್ರಶಸ್ತಿ ಹಾಗೂ 2021 ಮತ್ತು 2022 ನೇ ಸಾಲಿನ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಅಲ್ಲದೇ ವಿವಿಧ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ದಿ. 4 ರಂದು ಹಿಂದವಾಡಿಯ ಐ.ಎಂ.ಇ.ಆರ್ ಸಭಾಭವನದಲ್ಲಿ ನಡೆಯಿತು. ಸಿರಿಗನ್ನಡ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿ, ನನಗೆ ಹೃದಯ ಶಸ್ತ್ರಕ್ರಿಯೆ ಮಾಡುವುದಕ್ಕಿಂತ ಭಾಷಣ ಮಾಡುವುದು ಕಷ್ಟದ ಕೆಲಸ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಲೇಖಕ, ನಾಟಕಕಾರ ಬಿ. ಆರ್. ಪೊಲೀಸ ಪಾಟೀಲ ಅವರು ಮಾತನಾಡಿ, ಬರೆದಂತೆ ಬದುಕುವ ಧರ್ಮವನ್ನು ನಾವು ಕಲಿಯಬೇಕಾದದ್ದು ಜನಪದರಿಂದ, ಶರಣರಿಂದ, ಶರಣರ ವಚನದಿಂದ. ನಮಗೆ ದೇಸಿ ಕಾವ್ಯದಲ್ಲಿ ಅದ್ಭುತವಾದ ರಚನೆಗಳು ಸಿಗುತ್ತವೆ ಎಂದು ಹೇಳಿದರು.
ಕೃತಿಗಳ ಮೌಲ್ಯಮಾಪನ ಮಾಡಿದ ಶ್ರೀಮತಿ ಸಂಧ್ಯಾ ಹುನಗುಂಟೇಕರ ಅವರು ಮಾತನಾಡಿ, ಲೇಖಕ ಪ್ರಾದೇಶಿಕತೆಯನ್ನು ರೂಢಿಸಿಕೊಳ್ಳದೇ ಹೋದಂತಹ ಬರವಣಿಗೆ ಅದು ತನ್ನತನ ಕಳೆದುಕೊಂಡು ಹೋದಂತಾಗುತ್ತದೆ. ಅದಕ್ಕೆ ದೇಸಿಯತೆ ಅವಶ್ಯ ಎಂದು ಹೇಳಿದರು.
2023 ಸಿರಿಗನ್ನಡ ಗೌರವ ಪಡೆದ ಪ್ರೊ. ವಿ. ಎನ್.ಗೋಡಖಿಂಡಿ, ಪ್ರೊ. ರಾಜಶೇಖರ ಕರಡಿಗುದ್ದಿಯವರನ್ನು ಅಲ್ಲದೇ 2021- 23 ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ಪಡೆದಿರುವ ಡಾ. ಸಿ. ಕೆ. ನಾವಲಗಿ, ಡಾ. ಬಸವರಾಜ ಜಗಜಂಪಿ, ಬಸವಣ್ಣೆಪ್ಪ ಕಂಬಾರ, ಬಿ. ಎಸ್. ಜಗಾಪುರ, ಡಾ. ಜೆ.ಪಿ. ದೊಡ್ಡಮನಿ, ಡಾ. ಬಸು ಬೇವಿನಗಿಡದ, ಶೋಭಾ ನಾಯಿಕ, ರಂಜನಾ ನಾಯಕ, ಅಶೋಕ ಮಳಗಲಿ, ಡಾ. ಆರ್. ಬಿ. ಚಿಲುಮಿ, ಅಪ್ಪಾಸಾಹೇಬ ಸದರ ಜೋಶಿ, ಶ್ರೀಮತಿ ದೀಪಿಕಾ ಚಾಟೆ, ಶ್ರೀಮತಿ ಪ್ರಿಯಾ ಪುರಾಣಿಕ, ಶ್ರೀಮತಿ ಹಮೀದಾ ಬೇಗಮ್ ದೇಸಾಯಿ, ಶ್ರೀಮತಿ ಅನುಪಮಾ ಚೌಗಲೆ, ಪಂ. ರಾಜಪ್ರಭು ಧೋತ್ರೆ, ಶ್ರೀಮತಿ ಸುನಂದಾ ಮುಳೆ, ಬಸವರಾಜ ಗಾರ್ಗಿ, ಎ.ಎ. ಸನದಿ, ಶ್ರೀಮತಿ ಸುನಂದಾ ಹಾಲಬಾವಿ, ಡಾ. ಪಿ.ಜಿ. ಕೆಂಪಣ್ಣವರ, ಶ್ರೀಮತಿ ನೀರಜಾ ಗಣಾಚಾರಿ, ಯ. ರು. ಪಾಟೀಲ, ಶ್ರೀಮತಿ ಶಮಾ ಜಮಾದಾರ, ಸ, ರಾ, ಸುಳಕೂಡೆ, ಸುಮಾ ಕಾಟ್ಕರ್, ಬಿ. ಎಸ್. ಗವಿಮಠ, ಶ್ರೀಮತಿ ಶೀಲಾ ಅಂಕೋಲಾ, ಶೈಲಜಾ ಭಿಂಗೆ, ಬಾಳೇಶ ಚಿನಗುಡಿ, ಕಿತ್ತೂರಿನ ರಾಜಗುರು ಸಂಸ್ಥಾನಮಠ, ಮುಕುಂದ ಗೋರೆ ಅಲ್ಲದೇ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆ, ಕನ್ನಡ ವಾಚನ ಸ್ಪರ್ಧೆ, ದಾಸರ ಪದಗಳ ಸ್ಪರ್ಧೆಯಲ್ಲಿ ವಿಜೇಯಿತರನ್ನು ಗೌರವಿಸಲಾಯಿತು.
ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಅದ್ಯಕ್ಷರಾದ ಎಸ್. ಎಂ. ಕುಲಕರ್ಣಿ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮತಿ ದೀಪಾ ಪದಕಿ ಸಂಗಡಿಗರ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನೀರಜಾ ಗಣಾಚಾರಿ ಸ್ವಾಗತಿಸಿದರು. ಶಿರೀಷ ಜೋಶಿ ಪರಿಚಯಿಸಿದರು.
ಶ್ರೀಮತಿ ಭಾರತಿ ವಡವಿ, ಶ್ರೀಮತಿ ಸ್ವಾತಿ ಘೋಡೆಕರ ನಿರೂಪಿಸಿದರು. ಎನ್. ಬಿ. ದೇಶಪಾಂಡೆ, ಶ್ರೀಧರ ಹುಕ್ಕೇರಿ, ಸಂಜೀವ ಕುಲಕರ್ಣಿ, ಮೋಹನ ಗುಂಡ್ಲೂರ, ಸ್ವಾತಿ ಘೋಡೆಕರ, ನಾರಾಯಣ ಗಣಾಚಾರಿ, ರಾಧಿಕಾ ನಾಯಿಕ, ಪ್ರೊ. ಪಿ. ಜಿ. ಕೆಂಪಣ್ಣವರ, ಎಚ್. ಎಸ್. ದೇಶಪಾಂಡೆ, ಗುಂಡೇನಟ್ಟಿ ಮಧುಕರ ಉಪಸ್ಥಿತರಿದ್ದರು.
ಹೃದಯರೋಗ ತಜ್ಞ ಡಾ. ಮಹಾದೇವ ದೀಕ್ಷಿತ ಇವರಿಗೆ ಸಿರಿಗನ್ನಡ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು*