ಸತ್ತ ವ್ಯಕ್ತಿಗೆ ಮರುಜೀವ ನೀಡಿದ ಕೆಟ್ಟ ರಸ್ತೆಯ ಹೊಂಡಗಳು!

A B Dharwadkar
ಸತ್ತ ವ್ಯಕ್ತಿಗೆ ಮರುಜೀವ ನೀಡಿದ ಕೆಟ್ಟ ರಸ್ತೆಯ ಹೊಂಡಗಳು!

ಚಂಡಿಗಡ, ೧೩: ರಸ್ತೆಯ ಹೊಂಡಗಳು ಅದೆಷ್ಟೋ ಜನರ ಜೀವ ತೆಗೆದುಕೊಂಡಿವೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ತುರ್ತು ಚಿಕಿತ್ಸೆಗೆ ಸಾಗಿಸಬೇಕಾದರೆ ಹಾಳಾದ ರಸ್ತೆ ಹೊಂಡಗಳಿಂದ ಆಸ್ಪತ್ರೆಗೆ ರೋಗಿಗಳನ್ನು ದಾಖಲಿಸಲು ವಿಳಂಬವಾಗಿ ಅದೆಷ್ಟೋ ರೋಗಿಗಳು ದಾರಿ ಮಧ್ಯೆಯೇ ಜೀವ ಬಿಟ್ಟಿದ್ದಾರೆ. ಆದರೆ ಹರಿಯಾಣದ 80 ವರ್ಷದ ವ್ಯಕ್ತಿಯೊಬ್ಬರಿಗೆ ಈ ರಸ್ತೆಯ ಹೊಂಡಗಳೇ ಜೀವರಕ್ಷಕವಾಗಿ ಪರಿಣಮಿಸಿದ ವಿಚಿತ್ರ ಘಟನೆ ವರದಿಯಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಹರಿಯಾಣದ 80 ವರ್ಷದ ದರ್ಶನ್ ಸಿಂಗ್ ಬ್ರಾರ್ ಎಂಬ ವೃದ್ಧರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅದನ್ನು ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿದ್ದ ಅವರ ಕುಟುಂಬ ಸದಸ್ಯರು ದರ್ಶನ್ ಸಿಂಗ್ ಅವರು ಮೃತಪಟ್ಟ ವಿಚಾರವನ್ನು ಕುಟುಂದವರು ಮತ್ತು ಸ್ನೇಹಿತರಿಗೆಲ್ಲ ತಿಳಿಸಿದ್ದಾರೆ. ಮನೆಯ ವ್ಯಕ್ತಿ ಮೃತಪಟ್ಟ ವಿಚಾರ ತಿಳಿಸುತ್ತಲೇ ಕುಟುಂಬ ಸದಸ್ಯರಲ್ಲಿ ದುಃಖದ ವಾತಾವರಣ ಮನೆವಾಗಿತ್ತು.

ಇನ್ನೊಂದೆಡೆ ಕುಟುಂಬ ಸದಸ್ಯರು ಅಂತ್ಯಕ್ರಿಯೆ ನಡೆಸಲು ಸಿದ್ದತೆ ಮಾಡಲು ನಿರ್ಧರಿಸಿದ್ದರು. ಅದರಂತೆ ಕುಟುಂಬದ ಇತರ ಸದಸ್ಯರಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ಸುದ್ದಿಯನ್ನು ತಿಳಿಸಿದ್ದರು.

ಆಸ್ಪತ್ರೆಯಿಂದ ಮೃತದೇಹವನ್ನು ಮನೆಗೆ ತರುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದರಂತೆ ಆಂಬ್ಯುಲೆನ್ಸ ವ್ಯವಸ್ಥೆಯನ್ನು ಮಾಡಲಾಯಿತು. ದರ್ಶನ್ ಸಿಂಗ್ ಬ್ರಾರ್ ಅವರ ದೇಹವನ್ನು ಪಟಿಯಾಲದಿಂದ ಕರ್ನಾಲ್ ಬಳಿಯ ಅವರ ಮನೆಗೆ ಕೊಂಡೊಯ್ಯಲಾಗುತ್ತಿತ್ತು. ಈ ನಡುವೆ ವೇಗವಾಗಿ ಬರುತ್ತಿದ್ದ ಆಂಬ್ಯುಲೆನ್ಸ ರಸ್ತೆಯಲ್ಲಿದ್ದ ಹೊಂಡಗಳ ನಡುವೆಯೇ ಸಾಗಿಸಿದ್ದಾರೆ. ಈ ನಡುವೆ ಗಮನಿಸದೇ ವೇಗವಾಗಿ ಕೆಟ್ಟ ರಸ್ತೆಯಲ್ಲಿದ್ದ ದೊಡ್ಡ ಹೊಂಡ ಒಂದರಲ್ಲಿ ಹಾಕಿದ್ದಾರೆ. ಆಗ ಉಂಟಾದ ತೀವ್ರ ಧಡಿಕೆಗಳಿಂದ ಆಂಬ್ಯುಲೆನ್ಸನಲ್ಲಿದ್ದ ದರ್ಶನ್ ಸಿಂಗ್ ಅವರ ಮೃತದೇಹ ಜಿಗಿಜಿಗಿದು ಬಿದ್ದಿದೆ. ಆಗ ಶವದ  ಬಳಿ ಕುಳಿತ್ತಿದ್ದ ಅವರ ಮೊಮ್ಮಗನು ಸತ್ತ ತಾತನ ಕೈ ಆಚೆ ಈಚೆ ಅಲುಗಾಡುವುದನ್ನು ಕಂಡಿದ್ದಾನೆ. ಆಗ ಅಜ್ಜನ ಹೃದಯ ಬಡಿತವನ್ನು ಪರಿಶೀಲಿಸಿದಾಗ ಅಜ್ಜನ ಹೃದಯ ಬಡಿತದ ಸದ್ದು ಕೇಳಿದೆ.

ಕೂಡಲೇ ಈ ವಿಚಾರವನ್ನು ಆಂಬ್ಯುಲೆನ್ಸ ಚಾಲಕನಿಗೆ ತಿಳಿಸಿ ಹತ್ತಿರದ ಆಸ್ಪತ್ರೆಗೆ ಅವರನ್ನು ಸಾಗಿಸಿದ್ದಾರೆ. ಅಲ್ಲಿನ ಆಸ್ಪತ್ರೆಯ ವೈದ್ಯರು ಪರಿಶೀಲಿಸಿದ ವೇಳೆ ವ್ಯಕ್ತಿ ಬದುಕಿರುವುದು ಗೊತ್ತಾಗಿದೆ. ಸದ್ಯ ವೃದ್ಧರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸತ್ತ ವ್ಯಕ್ತಿ ಮತ್ತೆ ಬದುಕಿರುವ ವಿಚಾರ ಮನೆಯವರಿಗೆ ತಿಳಿಸುತ್ತಿದ್ದಂತೆ ಇದೊಂದು ಪವಾಡ ಎಂದು ಹೇಳಿಕೊಳ್ಳಲಾಗುತ್ತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.