ಚಿತ್ರದುರ್ಗ : ಇಂದು ಮುರುಘಾ ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಸಂತ್ರಸ್ತೆಯರು ನೀಡಿರುವ ಹೇಳಿಕೆಯ ವರದಿಯನ್ನು ತನಿಖಾಧಿಕಾರಿಗೆ ಸಲ್ಲಿಸಲಾಗುತ್ತದೆ.
ಸೆಕ್ಷನ್ 164 ಹೇಳಿಕೆ ಆಧರಿಸಿ ಶ್ರೀಗಳಿಗೆ ಇಂದು ಪೊಲೀಸರು ನೊಟೀಸ್ ಜಾರಿ ನೀಡಬಹುದು ಎನ್ನಲಾಗಿದ್ದು, ಚಿತ್ರದುರ್ಗದ ಕೋರ್ಟ್‍ನಲ್ಲಿ ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.
ಮುಂಜಾಗ್ರತಾ ಕ್ರಮವಾಗಿ ಮಠಕ್ಕೆ ಪೊಲೀಸ್ ಕಣ್ಗಾವಲಿದೆ. ಈ ಮಧ್ಯೆ, ಮಠದ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ವಿರುದ್ಧ ಹಾಸ್ಟೆಲ್ ವಾರ್ಡನ್ ರಶ್ಮಿ ನೀಡಿರುವ ದೂರಿನ ಮೇಲೆ ತನಿಖೆ ಮುಂದುವರಿದಿದೆ.

