ಮುಂಬೈ, ೨೪- ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಪೋಕ್ಸೋ ಕಾಯ್ದೆ ಅಡಿ ಬಂಧಿತನಾಗಿದ್ದ ಯುವಕನಿಗೆ ಜಾಮೀನು ಮಂಜೂರು ಮಾಡಿರುವ ಬಾಂಬೆ ಹೈಕೋರ್ಟ, 15 ವರ್ಷದ ಬಾಲಕಿಗೆ ಬಲಾತ್ಕಾರ ಕೃತ್ಯದ ಅರಿವಿತ್ತು ಎಂದು ಅಭಿಪ್ರಾಯ ಪಟ್ಟಿದೆ.
ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ನೇತೃತ್ವದ ಏಕ ಸದಸ್ಯ ಪೀಠ ಜಾಮೀನು ಆದೇಶ ನೀಡಿದ್ದು, ವಿಚಾರಣೆ ವೇಳೆ ಬಾಲಕಿ ಸಮ್ಮತಿಯ ಮೇರೆಗೆ ಯುವಕನ ಚಿಕ್ಕಮ್ಮನ ಮನೆಗೆ ತೆರಳಿರುವುದನ್ನು ಗಮನಿಸಿದೆ.
ಅಲ್ಲದೆ ಬಾಲಕಿ, ಯುವಕನೊಂದಿಗೆ ನಿರಂತರವಾಗಿ ವಾಟ್ಸಾಪ್ ಚಾಟ್ ನಲ್ಲಿರುವುದು ಪರಿಶೀಲಿಸಿದ್ದು, ಜೊತೆಗೆ ಆರೋಪಿ ಏಪ್ರಿಲ್ 2021 ರಿಂದ ಜೈಲಿನಲ್ಲಿರುವ ಕಾರಣ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಯುವಕ, ಬಾಲಕಿಯೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬಾರದು ಹಾಗೂ ಆಕೆ ವಾಸಿಸುವ ಪ್ರದೇಶಕ್ಕೆ ಭೇಟಿ ನೀಡಬಾರದು ಎಂದು ಜಾಮೀನು ಆದೇಶದಲ್ಲಿ ತಿಳಿಸಲಾಗಿದ್ದು, ಇದನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಮುಂಬೈನ ಸಬರ್ಬನ್ ಏರಿಯಾದಲ್ಲಿ ವಾಸವಾಗಿದ್ದ ಬಾಲಕಿ ಏಪ್ರಿಲ್ 6, 2021 ರಂದು ತನ್ನ ಮೇಲೆ ಅತ್ಯಾಚಾರ ನಡೆದಿರುವುದಾಗಿ ಏಪ್ರಿಲ್ 29ರಂದು ಪೊಲೀಸರಿಗೆ ದೂರು ನೀಡಿದ್ದಳು. ತಡವಾಗಿ ಪ್ರಕರಣ ದಾಖಲಿಸಿರುವುದನ್ನೂ ನ್ಯಾಯಾಲಯ ಜಾಮೀನು ತೀರ್ಪಿನಲ್ಲಿ ಉಲ್ಲೇಖಿಸಿದೆ.