ಬೆಂಗಳೂರು, ೧೭- ಮಳೆಯ ಕುರಿತ ಬೆಂಗಳೂರಿನ ಸುಮಾರು 130 ವರ್ಷಗಳ ದಾಖಲೆಯಿದ್ದು, ಆದರೆ 2022 ರಲ್ಲಿ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಮಳೆಯಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಈ ಹಿಂದೆ ಕೆಲವೊಂದು ಬಡಾವಣೆಗಳಲ್ಲಿ ಮೊದಲ ಅಂತಸ್ತಿನವರೆಗೂ ಮಳೆ ನಿಂತಿದ್ದು ಕಂಡುಬಂದಿತ್ತು. ರವಿವಾರ ಸಹ ನಗರದಾದ್ಯಂತ ಮಳೆಯಾಗಿದೆ.
2017ರಲ್ಲಿ 170 ಸೆಂ.ಮೀ. ಮಳೆಯಾಗಿದ್ದು ಒಂದು ದಾಖಲೆಯಾಗಿತ್ತು. ಭಾನುವಾರದ ಹೊತ್ತಿಗೆ ಬೆಂಗಳೂರಿನಲ್ಲಿ ಒಟ್ಟು 170.34 ಸೆಂಟಿಮೀಟರ್ ಗಿಂತ ಅಧಿಕ ಮಳೆಯಾಗಿದ್ದು, ಹೊಸ ದಾಖಲೆ ಸೃಷ್ಟಿಸಿದೆ.