ಹೊಸದಿಲ್ಲಿ, ೨-: ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಅವರು ಸೆಪ್ಟೆಂಬರ್ 5 ರಿಂದ 8 ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಹಸೀನಾ ಅವರ ಭೇಟಿಯ ಸಮಯದಲ್ಲಿ ಕುಶಿಯಾರಾ ನದಿಯ ನೀರಿನ ಮಧ್ಯಂತರ ಹಂಚಿಕೆ ಕುರಿತು ಎರಡೂ ದೇಶಗಳು ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.
ಇದೇ ವೇಳೆ ಹಸೀನಾ ಅವರು ರಾಜಸ್ಥಾನದ ಅಜ್ಮೀರದಲ್ಲಿರುವ ಪೂಜ್ಯ ಸೂಫಿ ಸಂತ ಮೊಯಿನುದ್ದೀನ ಚಿಸ್ತಿ ಅವರ ದರ್ಗಾಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.
ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ ಬಾಗ್ಚಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತ ಭೇಟಿ ವೇಳೆ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ ಮತ್ತು ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಉಪಾಧ್ಯಕ್ಷ ಜಗದೀಪ ಧನಕರ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿದರು.