ಬೆಳಗಾವಿ,ಡಿ.27 : ಅನಗೋಳದಲ್ಲಿರುವ ಬೆಮ್ಕೊ ಹೈಡ್ರಾಲಿಕ್ಸ್ ನಿಂದ 4ನೇ ರೈಲ್ವೆ ಗೇಟ್ ವರೆಗಿನ ರಸ್ತೆಯನ್ನು “ಬಸವರಾಜ ಬೊಮ್ಮಾಯಿ ರಸ್ತೆ” ಎಂದು ನಾಮಕರಣ ಮಾಡಲಾಯಿತು.
ಕೆ.ಎಲ್.ಇ. ಸಂಸ್ಥೆಯ ಡಾ.ಶೇಷಗಿರಿ ಎಂಜಿನಿಯರಿಂಗ ಕಾಲೇಜ ಎದುರಿಗೆ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆಯ ಸಚಿವರಾದ ಭೈರತಿ ಬಸವರಾಜ ಅವರು, “ಬಸವರಾಜ ಬೊಮ್ಮಾಯಿ” ಮಾರ್ಗದ ಫಲಕವನ್ನು ಅನಾವರಣಗೊಳಿಸಿದರು.
ಸ್ಮಾರ್ಟ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿರುವ ರಸ್ತೆಗೆ ನಾಮಕರಣ ಮಾಡುವುದರ ಜತೆಗೆ ಅಲಂಕೃತ ವಿದ್ಯುದ್ದೀಪಗಳಿಗೆ ಕೂಡ ಸಚಿವರು ಚಾಲನೆ ನೀಡಿದರು.
ಶಾಸಕ ಅಭಯ ಪಾಟೀಲ, ಸ್ಮಾರ್ಟ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ, ಮಹಾನಗರ ಪಾಲಿಕೆ ಸದಸ್ಯ ಶ್ರೀಶೈಲ ಕಾಂಬಳೆ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.