ಬೆಳಗಾವಿ, ೧೩- ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ 11 ಮತ್ತು ಬಿಜೆಪಿ 7 ಸ್ಥಾನ ಗಳಿಸಿದೆ.
ಗೋಕಾಕ, ನಿಪ್ಪಾಣಿ, ಬೆಳಗಾವಿ ದಕ್ಷಿಣ, ಅರಭಾವಿ, ಖಾನಾಪುರ ಮತ್ತು ರಾಯಬಾಗ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು ಜಿಲ್ಲೆಯ ಉಳಿದ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಬೈಲಹೊಣಗಲದಿಂದ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕೌಜಲಗಿ, ಬೆಳಗಾವಿ ಉತ್ತರದಿಂದ ಕಾಂಗ್ರೆಸ್ ನ ರಾಜು ಸೇಠ ಮತ್ತು ನಿಪ್ಪಾಣಿಯಿಂದ ಬಿಜೆಪಿಯ ಶಶಿಕಲಾ ಜೊಲ್ಲೆ ಗೆಲುವು ಸಾಧಿಸಿದ್ದಾರೆ.