ಹಂಪಿ, ೨೫- ವಿಶ್ವ ವಿಖ್ಯಾತ ಹಂಪಿ ವೀಕ್ಷಣೆಗೆ ಬಂದಿದ್ದ ಬೆಲ್ಜಿಯಂ ಮೂಲದ ಯುವತಿಯೊಬ್ಬಳು ಆಕೆಗೆ ಪ್ರವಾಸಿ ಮಾರ್ಗದರ್ಶಿಯಾಗಿದ್ದ ಹಂಪಿ ಯುವಕನಿಗೆ ಮನಸೋತು ಇದೀಗ ಆತನೊಂದಿಗೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾಳೆ.
ಬೆಲ್ಜಿಯಂ ಮೂಲದ ಕೆಮಿಲ್ ಎಂಬಾಕೆ ಹಂಪಿಯ ಪ್ರವಾಸಿ ಮಾರ್ಗದರ್ಶಿ ಅನಂತರಾಜು ಅವರೊಂದಿಗೆ ಇಂದು ವಿವಾಹವಾಗಿದ್ದು, ಇವರಿಬ್ಬರೂ ನಾಲ್ಕೈದು ವರ್ಷಗಳ ಹಿಂದೆ ಹಂಪಿಯಲ್ಲಿ ಭೇಟಿಯಾಗಿದ್ದರು.
ತಮಗೆ ಮಾರ್ಗದರ್ಶಿಯಾಗಿದ್ದ ಅನಂತರಾಜು ಅವರೊಂದಿಗೆ ಕೆಮಿಲ್ ತಮ್ಮ ದೇಶಕ್ಕೆ ತೆರಳಿದ ಬಳಿಕವೂ ಸಂಪರ್ಕ ಮುಂದುವರಿಸಿದ್ದು, ಜೊತೆಗೆ ಹಿಂದೂ ಸಂಪ್ರದಾಯ, ಧಾರ್ಮಿಕ ನಂಬಿಕೆಗಳಿಗೆ ಮಾರುಹೋಗಿದ್ದರು.
ಕೆಮಿಲ್ ಹಾಗೂ ಅನಂತರಾಜು ನಡುವೆ ಪ್ರೇಮ ಮೊಳಕೆಯೊಡೆದಿದ್ದು, ಇಬ್ಬರೂ ತಮ್ಮ ಕುಟುಂಬಸ್ಥರ ಸಮ್ಮತಿ ಬಳಿಕ ಇಂದು ಹಂಪಿ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ವೈವಾಹಿಕ ಬಂಧನಕ್ಕೊಳಗಾಗಿದ್ದಾರೆ.