ಉಜ್ಜೈನಿ: 41 ವರ್ಷದ ರಾಕ್ಷಸನೊಬ್ಬ ತನಗೆ ಒಂದು ಕಪ್ ಚಹಾ ಮಾಡಿ ಕೊಡಲಿಲ್ಲ ಎಂದು ಪತ್ನಿಯನ್ನು ಬಡಿದು ಕೊಂದಿದ್ದಾನೆ.
ಮಧ್ಯಪ್ರದೇಶದ ಉಜ್ಜೈನಿ ಜಿಲ್ಲೆಯ ಝಾರ್ಡಾ ಪೊಲೀಸ್ ಠಾಣೆ ವ್ಯಾಪ್ತಿಯ ಘಾಟಿಯಾ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
40 ವರ್ಷದ ಹೆಂಡತಿಯು ಚಹಾ ಮಾಡದ ಕಾರಣ ಚಪಾತಿ ತಯಾರಿಸಲು ಬಳಸಲಾಗುವ ರೋಲಿಂಗ್ ಬೋರ್ಡನಿಂದ ಹಲ್ಲೆ ಮಾಡಿದ್ದಾನೆ ಎಂದು ಜಾರ್ಡಾ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ನಂತರ ಆರೋಪಿ ತನ್ನ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದು ಆಕೆಗೆ ವಿದ್ಯುತ್ ಶಾಕ್ ಹೊಡೆದಿದೆ ಎಂದು ಹೇಳಿದ್ದಾನೆ. ಆದರೆ, ಮೃತಳ ದೇಹದ ಮೇಲೆ ವಿದ್ಯುತ್ ಸ್ಪರ್ಶದ ಗುರುತುಗಳಿರಲಿಲ್ಲ ಮತ್ತು ಬಳಿಕ ಆಕೆ ಸಾವಿಗೀಡಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.
ಪೊಲೀಸರ ದಾರಿ ತಪ್ಪಿಸಲು ಆರೋಪಿ ಯತ್ನಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಯು ಬೇರೆ ರೀತಿಯಲ್ಲಿ ಸೂಚಿಸಿದೆ ಎಂದು ಅಧಿಕಾರಿ ಹೇಳಿದರು.
ಆರೋಪಿಯು ತನಿಖೆಯ ವೇಳೆ ಪರಾರಿಯಾಗಿದ್ದ, ನಂತರ ಆತನನ್ನು ಬಂಧಿಸಲಾಯಿತು, ವಿಚಾರಣೆ ವೇಳೆ ವ್ಯಕ್ತಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೋಲೀಸರು ಹೇಳಿದ್ದಾರೆ.