ಬೆಂಗಳೂರು, ೧೬- ಗುಂಬಜ್ ರೀತಿಯಲ್ಲಿ ಇರುವ ಬಸ್ ನಿಲ್ದಾಣಗಳನ್ನು ಒಡೆಯುವುದಾಗಿ ಹೇಳಿರುವ ಪ್ರತಾಪ್ ಸಿಂಹ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು, ಮೈಸೂರು ಅರಮನೆ ಇರುವುದು ಕೂಡ ಗುಂಬಜ್ ರೀತಿಯ ಕಟ್ಟಡ. ಅದನ್ನು ಒಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಪ್ರತಾಪ್ ಸಿಂಹ ಸಮಾಜದಲ್ಲಿ ಅಶಾಂತಿ ಹುಟ್ಟುಹಾಕುವ ಸಲುವಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಟಿಪ್ಪು ಸುಲ್ತಾನ್ ಕುರಿತು ಮೈಸೂರು ಸಂಸದ ಪ್ರತಾಪ್ ಸಿಂಹ ಅವಹೇಳನಾಕಾರಿಯಾಗಿ ಮಾತನಾಡಿರುವ ಕುರಿತಂತೆ ಕಿಡಿ ಕಾರಿದ ಅವರು, ಅಯ್ಯೋ ಹುಚ್ಮುಂಡೆದೆ ಸತ್ತಿರುವವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡುತ್ತೀಯಾ. ಓಟಿಗಾಗಿ ಚಿಲ್ಲರೆ ಮಾತನಾಡುವುದನ್ನು ನಿಲ್ಲಿಸು ಎಂದು ಹೇಳಿದ ಸಿಎಂ ಇಬ್ರಾಹಿಂ, ಬಾಯಿಗೆ ಬಂದಂತೆ ಮಾತನಾಡುವ ನಿನಗೆ ನಾಚಿಕೆಯಾಗಬೇಕು ಎಂದರು.
ಟಿಪ್ಪು ಸಾಹಸದ ಬಗ್ಗೆ ಬ್ರಿಟಿಷರು ಹಾಡಿ ಹೊಗಳಿದ್ದಾರೆ. ರಾಷ್ಟ್ರಪತಿಗಳು ಸಹ ಟಿಪ್ಪುವನ್ನು ಕೊಂಡಾಡಿದ್ದಾರೆ ಎಂದು ಅವರು ಹೇಳಿದ್ದಾರೆ.