ಚಿಕ್ಕೋಡಿ : ರಾಜ್ಯದ ಹಿರಿಯ ರಾಜಕಾರಣಿ, ಬಿಜೆಪಿಯ ಪ್ರಭಾಕರ ಕೋರೆ ಅವರು ತಮ್ಮದೇ ತಾಲ್ಲೂಕು ಚಿಕ್ಕೋಡಿಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ, ಮಾಜಿ ಸಂಸದ ರಮೇಶ ಕತ್ತಿಯವರ ಗೆಲುವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ರಮೇಶ ಗೆಲುವು ಕಠಿಣ. ಅವರ ಪ್ರತಿಸ್ಪರ್ಧಿ ಗಣೇಶ ಹುಕ್ಕೇರಿ ಅವರು ಕ್ಷೇತ್ರದಲ್ಲಿ ತುಂಬಾ ಕೆಲಸ ಮಾಡಿದ್ದಾರೆ. ಹಾಗಾಗಿ ಬಿಜೆಪಿಗೆ ಕ್ಷೇತ್ರ ಒಲಿಯುವ ಸಾಧ್ಯತೆ ಕಡಿಮೆ ಎಂದು ಕೋರೆ ಪತ್ರಕರ್ತರಿಗೆ ತಿಳಿಸಿದರು.
ಗಣೇಶ ಹುಕ್ಕೇರಿಯವರ ತಂದೆ, ಮಾಜಿ ಸಂಸದ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು 24X7 ರಾಜಕಾರಣಿ. ಸರಕಾರ ಯಾವುದೇ ಇರಲಿ ತಮ್ಮ ಕ್ಷೇತ್ರದ ಕೆಲಸ ಮಾಡಿಸಿಕೊಳ್ಳುತ್ತಾರೆ. ಹಾಗಾಗಿ ರಮೇಶ ಕತ್ತಿಗೆ ಅವಕಾಶ ಕಡಿಮೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷರೂ ಆಗಿರುವ ಕೋರೆ ತಿಳಿಸಿದರು.
ತಮ್ಮ ಅಭಿಪ್ರಾಯ ವಿವಾದಕ್ಕೆ ಆಸ್ಪದವಾಗಬಾರದೆಂದು “ರಮೇಶ ಕತ್ತಿಯವರ ಗೆಲ್ಲುವ ಸಾಧ್ಯತೆ 50:50 ಇದೆ” ಎಂದು ಕೋರೆ ನಂತರ ಸಮಜಾಯಿಸಿಕೊಂಡರು.
ಆದರೆ, ದಿ. ಉಮೇಶ ಕತ್ತಿಯವರ ಹುಕ್ಕೇರಿ ಕ್ಷೇತ್ರದಿಂದ ಸ್ಪರ್ಧೆಸಿರುವ ಅವರ ಪುತ್ರ ನಿಖಿಲ ಕತ್ತಿಯವರು ಅನುಕಂಪದ ಮೇಲೆ ಮಾತ್ರವಲ್ಲ, ತಮ್ಮ ವೈಯುಕ್ತಿಕ ವರ್ಚಸ್ಸು, ವಿದ್ಯಾರ್ಹತೆ, ಜನರೊಂದಿಗೆ ಉತ್ತಮ ಬಾಂಧವ್ಯದ ಮೂಲಕ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಕೋರೆ ಹೇಳಿದರು.