ಬೆಂಗಳೂರು: ಮೃತನ ವಿವಾಹೇತರ ಸಂತಾನಕ್ಕೂ ಪರಿಹಾರದಲ್ಲಿ ಹಕ್ಕು ಇದೆ ನ್ಯಾಯಮೂರ್ತಿ ಎ.ಪಿ. ಸಂದೇಶ ಅವರಿದ್ದ ಹೈಕೋರ್ಟ ಪೀಠ ಆದೇಶ ನೀಡಿದೆ. ಮೋಟಾರು ವಾಹನ ಅಪಘಾತದಲ್ಲಿ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.
2012 ರಲ್ಲಿ ಮಲ್ಲಿಕಾರ್ಜುನ ಎಂಬುವವರು ಅಪಘಾತದಲ್ಲಿ ಮೃತಪಟ್ಟಿದ್ದರು. ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ಮತ್ತು ಪುತ್ರ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು. ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಗೆ ಪರಿಹಾರದ ಹಕ್ಕು ಇಲ್ಲ. ಆದರೆ, ಆ ಸಂಬಂಧದ ಕಾರಣ ಹುಟ್ಟಿದ ಪುತ್ರನಿಗೆ ಪರಿಹಾರದಲ್ಲಿ ಹಕ್ಕಿದೆ. ಮೃತನ ತಂದೆ ತಾಯಿಗೆ ಪರಿಹಾರದ ತಲಾ ಶೇಕಡ 30ರಷ್ಟು ನೀಡಬೇಕು. ಮೃತನ ಪುತ್ರನಿಗೆ ಪರಿಹಾರದ ಶೇಕಡ 40ರಷ್ಟು ನೀಡಬೇಕು ಎಂದು ವಿಮಾ ಕಂಪನಿಗೆ ಹೈಕೋರ್ಟ ಏಕ ಸದಸ್ಯ ಪೀಠ ನಿರ್ದೇಶನ ನೀಡಿದೆ.