ಬೆಂಗಳೂರು: ಸಾಕಷ್ಟು ಮಾಹಿತಿ ಸಂಗ್ರಹಿಸಿ, ಎಲ್ಲ ರಾಜ್ಯಗಳಲ್ಲಿ ವಿವರ ಪಡೆದು, ಪೂರ್ವ ಸಿದ್ಧತೆ ಮಾಡಿಕೊಂಡ ನಂತರವೇ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ವಿರೋಧಿ ಚಟುವಟಿಕೆಗಳ ಜತೆಗೆ ಹಲವು ಗಲಭೆಗಳಲ್ಲಿ ಈ ಸಂಘಟನೆ ಚಿತಾವಣೆಯಿತ್ತು. ಎಲ್ಲ ಆಯಾಮಗಳನ್ನು ನರೇಂದ್ರ ಮೋದಿ, ಅಮಿತ್ ಷಾ ದಿಟ್ಡ ನಿರ್ಧಾರ ತೆಗೆದುಕೊಂಡಿದ್ದು, ವಿಧ್ವಂಸಕ ಕೃತ್ಯಗಳಿಗೆ ಅವಕಾಶವಿಲ್ಲ ಎಂಬುದನ್ನು ಸಾರಿದ್ದಾರೆ ಎಂದರು.
ಪಿಎಫ್ಐ ನಿಷೇಧಿಸುವಂತೆ ಕಾಂಗ್ರೆಸ್, ಸಿಪಿಎಂ ಸೇರಿ ಹಲವು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಕಾನೂನು ಚೌಕಟ್ಟಿನಲ್ಲಿ ಸರ್ಕಾರ ಕ್ರಮವಹಿಸಿದ್ದು, ಇಂತಹ ಶಕ್ತಿಗಳ ಜತೆಗೆ ಜನರು ಕೈಜೋಡಿಸಬಾರದು ಎಂದು ಬೊಮ್ಮಾಯಿ ಮನವಿ ಮಾಡಿದರು.