ಹೊಸದಿಲ್ಲಿ : ಪ್ರಧಾನಿ ಮೋದಿಯವರ ಜನ್ಮದಿನದಂದು ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ರಾಷ್ಟ್ರೀಯ ನಿರುದ್ಯೋಗಿಗಳ ದಿನ ಆಚರಿಸಿ, ಪ್ರತಿಭಟನೆ ನಡೆಸಿದರು.
ಈ ಪ್ರಧಾನಿ ಮೋದಿ ಹುಟ್ಟು ಹಬ್ಬದ ದಿನವನ್ನು ಯುವ ಕಾಂಗ್ರೆಸ್ ಮುಖಂಡರು ದೇಶದ ನಿರುದ್ಯೋಗವನ್ನು ಹೋಗಲಾಡಿಸಲು ನಿರುದ್ಯೋಗ ದಿನವನ್ನು ಆಚರಿಸಿದೆ. ದೇಶದ ನಾನಾ ರಾಜ್ಯಗಳಲ್ಲಿ ಗ್ರ್ಯಾಜುವೇಟ್ ಬಟ್ಟೆ ಧರಿಸಿ ಪಕೋಡ, ಚಹಾ ಮಾರಿ ಪ್ರತಿಭಟನೆ ನಡೆಸಿದರು.
45 ವರ್ಷಗಳಿಂದ ದೇಶದಲ್ಲಿ ನಿರುದ್ಯೋಗ ಉತ್ತುಂಗದಲ್ಲಿದೆ ಮತ್ತು ಯುವಕರ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುವುದು ಭಾರತ ಜೋಡೋ ಯಾತ್ರೆಯ ಪ್ರಾಥಮಿಕ ಉದ್ದೇಶಗಳಲ್ಲಿ ಒಂದಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತ ಜೋಡೋ ಯಾತ್ರೆಯ ಎಂಟನೇ ದಿನದ ಅಂತ್ಯದಲ್ಲಿ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ದ್ವೇಷದ ರಾಜಕೀಯದಿಂದಾಗಿ ಭಾರತವು ತನ್ನ ಅತ್ಯಂತ ಕೆಟ್ಟ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ದ್ವೇಷದಿಂದ ತುಂಬಿರುವ ರಾಷ್ಟ್ರವು ಪ್ರಗತಿಯ ದೃಷ್ಟಿಯನ್ನು ಹೊಂದಲು ಸಾಧ್ಯವಿಲ್ಲ ಎಂದು ಅವರು ಹೇಳಿದರು, ಯಾತ್ರೆಯಲ್ಲಿ ಸೇರುವ ಲಕ್ಷಾಂತರ ಜನರು ಆರ್‌ಎಸ್‌ಎಸ್-ಬಿಜೆಪಿಗೆ ಈ ದೇಶವನ್ನು ನಾಶಮಾಡಲು ಬಿಡುವುದಿಲ್ಲ ಎಂಬ ಸಂದೇಶವನ್ನು ಕಳುಹಿಸಲು ಬಯಸುತ್ತಾರೆ ಎಂದು ಕಾಂಗ್ರೆಸ್ ನಾಯಕ ಪ್ರತಿಪಾದಿಸಿದ್ದಾರೆ.
ಒಮ್ಮೆ ನಾವು ದೇಶವನ್ನು ಒಂದುಗೂಡಿಸಿದಾಗ, ನಾವು ಸಾಮರಸ್ಯವನ್ನು ತಂದಾಗ, ನಾವು ನಿರುದ್ಯೋಗ ಮತ್ತು ಬೆಲೆ ಏರಿಕೆಯ ಸಮಸ್ಯೆಗಳನ್ನು ಪರಿಹರಿಸಬಹುದು. ಮುಖ್ಯ ವಿಷಯವೆಂದರೆ ದ್ವೇಷ ಮತ್ತು ಪ್ರಗತಿಯ ನಡುವೆ ಸಂಬಂಧವಿದೆ ಎಂದು ಅರ್ಥಮಾಡಿಕೊಳ್ಳುವುದು ಅಗತ್ಯವೆಂದು ಹೇಳಿದ್ದಾರೆ.
ಈ ಭಾರತ್ ಜೋಡೋ ಯಾತ್ರೆಯ ವೇಳೆ ಅಪಾರ ಜನಸ್ತೋಮ ಸೆಳೆಯುತ್ತಿರುವ ರಾಹುಲ್ ಅವರು ಫೇಸ್‌ಬುಕ್‌ನಲ್ಲಿ ಈ ಸಂದೇಶವನ್ನು ಪೋಸ್ಟ್ ಹೀಗೆ ಮಾಡಿದ್ದಾರೆ.

ನಮ್ಮದು ಯುವ ದೇಶ. ನಾವು ಯುವಕರ ರೂಪದಲ್ಲಿ ವಿಶಿಷ್ಟ ಶಕ್ತಿಯನ್ನು ಹೊಂದಿದ್ದೇವೆ. ನಮ್ಮ ಯುವಕರ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ನಮ್ಮ ದೇಶವು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದಬಹುದು. ಆದರೆ ನಾವು ನಿರುದ್ಯೋಗದಲ್ಲಿ 45 ವರ್ಷಗಳ ಏರಿಕೆ ಪ್ರಮಾಣವನ್ನು ಎದುರಿಸುತ್ತಿದ್ದೇವೆ. ವಿದ್ಯಾವಂತ ಯುವಕರು ಉದ್ಯೋಗ ಆರಸಿ ಅಲೆದಾಡುತ್ತಿದ್ದಾರೆ.
ನಮ್ಮ ಯುವಕರ ಬೆನ್ನೆಲುಬನ್ನು ಬಲಪಡಿಸುವುದು, ಅವರನ್ನು ರಚನಾತ್ಮಕ ಹಾದಿಯಲ್ಲಿ ಕೊಂಡೊಯ್ಯುವುದು ನಮ್ಮ ಕರ್ತವ್ಯ ಹಾಗೂ ಇಂದಿನ ಅಗತ್ಯವಾಗಿದೆ ಎಂದು ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.



