ಬೆಳಗಾವಿ, ೧೯- ಬೆಳಗಾವಿ ವಿಧಾನಸಭೆಯಲ್ಲಿ ಬಸವಣ್ಣ, ವಾಲ್ಮೀಕಿ, ಸಂತ ಶಿಶುನಾಳ ಶರೀಫ, ಕನಕದಾಸ, ನಾರಾಯಣಗುರು, ಕುವೆಂಪು, ಅಂಬೇಡ್ಕರ, ನೆಹರೂ, ಜಗಜೀವನ ರಾಮ್, ಸರದಾರ ವಲ್ಲಭಭಾಯಿ ಪಟೇಲ, ಮತ್ತಿತರ ಮಹನೀಯರ ಭಾವಚಿತ್ರ ಹಾಕಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
ಈ ಎಲ್ಲ ಮಹನಿಯರ ಭಾವಚಿತ್ರಗಳನ್ನು ಹಿಡಿದು ಬೆಳಗಾವಿಯ ಸುವರ್ಣಸೌಧದ ಪ್ರವೇಶ ದ್ವಾರದಲ್ಲಿ ಸೋಮವಾರ ಬೆಳಿಗ್ಗೆ ಧರಣಿ ನಡೆಸಲಾಯಿತು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ, ವಿಧಾನಸಭೆ ಉಪನಾಯಕ ಯು.ಟಿ. ಖಾದರ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಮ ಅಹ್ಮದ, ಹಿರಿಯ ಮುಖಂಡರಾದ ಎಚ್. ಕೆ. ಪಾಟೀಲ, ಕೆ ಜೆ ಜಾರ್ಜ, ಆರ್ ವಿ ದೇಶಪಾಂಡೆ ಸೇರಿದಂತೆ ಪ್ರಮುಖ ಪಕ್ಷದ ಪ್ರಮುಖ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.