ಉತ್ತರಪ್ರದೇಶ : ಪೇರಲ ಹಣ್ಣು ಕಿತ್ತು ತಿಂದ ದಲಿತ ವ್ಯಕ್ತಿಯನ್ನು ಥಳಿಸಿ, ಕೊಂದ ಘಟನೆ ಉತ್ತರಪ್ರದೇಶದ ಅಲಿಗಡದಲ್ಲಿ ನಡೆದಿದೆ.
ಆರೋಪಿಗಳನ್ನು ಭೀಮಸೇನ ಮತ್ತು ಬನ್ವಾರಿಲಾಲ ಎಂದು ಗುರುತಿಸಲಾಗಿದ್ದು, ದಲಿತ ವ್ಯಕ್ತಿ ಓಂಪ್ರಕಾಶ ಎಂಬವರು ತೋಟದಿಂದ ಪೇರಲ ಹಣ್ಣನ್ನು ಕಿತ್ತಿದ್ದಕ್ಕೆ ದೊಣ್ಣೆಗಳಿಂದ ಹೊಡೆದು ಕೊಂದಿದ್ದಾರೆ.
ಘಟನೆ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಓಂಪ್ರಕಾಶ ಅವರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಸರ್ಕಲ್ ಅಧಿಕಾರಿ ಅಭಯಕುಮಾರ ತಿಳಿಸಿದ್ದಾರೆ.
ಇಬ್ಬರು ಆರೋಪಿಗಳ ವಿರುದ್ಧ ಕೊಲೆ ಮತ್ತು ಎಸಿ, ಎಸ್ಟಿ ಕಾಯಿದೆಯ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.