ಬೆಂಗಳೂರು: ಮಹಾಪಾಪಿ ಮಗಳೊಬ್ಬಳು ತನ್ನ ಹೆತ್ತ ತಾಯಿಯನ್ನೇ ಕೊಂದು ಸೂಟಕೇಸ್ ನಲ್ಲಿ ಆಕೆಯ ಶವ ಪ್ಯಾಕ್ ಮಾಡಿ ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಜರುಗಿದೆ.
ಪಿಸಿಯೋ ಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೇನಾಲಿ ಸೇನ್ ಎಂಬ 39 ವರ್ಷದ ಮಹಿಳೆಯೇ ತನ್ನ 70 ವರ್ಷದ ತಾಯಿ ಬೀವಾ ಪಾಲ್ ಎಂಬಾಕೆಯನ್ನು ಕೊಲೆ ಮಾಡಿದ್ದಾಳೆ. ಸೇನಾಲಿಯ ಅತ್ತೆ ಮತ್ತು ತನ್ನ ಅಮ್ಮನ ಜಗಳದ ಕಾರಣ ಈ ಘೋರ ಕೃತ್ಯ ಎಸಗಿದ್ದು ಒಂದೇ ಮನೆಯಲ್ಲಿದ್ದ ಬೀಗರ ಜಗಳಕ್ಕೆ ಬೇಸತ್ತು ಬೀವಾ ಪೌಲ್ ತನ್ನ ಮಗಳಿಗೆ ನಿದ್ದೆ ಮಾತ್ರೆ ಹಾಕಿ ಸಾಯಿಸುವುದಾಗಿ ಹೆದರಿಸಿದ್ದಾಳೆ. ಆದರೆ ಮಗಳೇ ನಿನ್ನೆ ಬೆಳಿಗ್ಗೆ ಅಮ್ಮನಿಗೆ 20 ಮಾತ್ರೆಗಳನ್ನು ನುಂಗಿಸಿದ್ದಾಳೆ. ನಂತರ ಸುಮಾರು 11 ಗಂಟೆಗೆ ತಾಯಿ ಹೊಟ್ಟೆ ನೋವು ಎಂದಾಗ ಮಗಳು ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಅಷ್ಟೇ ಅಲ್ಲದೇ ದೊಡ್ಡ ಟ್ರಾಲಿ ಸೂಟಕೇಸ್ ನಲ್ಲಿ ತಾಯಿಯನ್ನು ಪ್ಯಾಕ್ ಮಾಡಿ ತಂದೆ ಫೋಟೋ ಜೊತೆಗಿಟ್ಟು ನೇರವಾಗಿ ಮೈಕೋ ಲೇಔಟ್ ಠಾಣೆಗೆ ಬಂದಿದ್ದಾಳೆ.
ಬಿಳಕಹಳ್ಳಿಯ ಎನ್ ಎಸ್ ಆರ್ ಗ್ರೀನ್ ಅಪಾರ್ಟಮೆಂಟ್ ನಿಂದ ಆಟೋದಲ್ಲಿ ಠಾಣೆಗೆ ಬಂದು ಶವದ ಸಮೇತ ಶರಣಾಗಿದ್ದು ಪೊಲೀಸರು ಇದನ್ನೆಲ್ಲ ನೋಡಿ ಬೆಚ್ಚಿಬಿದ್ದಿದ್ದಾರೆ. ಈಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಯ ವಿಚಾರಣೆ ನಡೆಸಿದ್ದಾರೆ.