ಹೊಸದಿಲ್ಲಿ, ೬- ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಗಳಿಗೆ ಶೇಕಡಾ 10 ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಸುಪ್ರೀಮ ಕೋರ್ಟ ಕೂಡ ಇದನ್ನು ಎತ್ತಿ ಹಿಡಿದಿದೆ.
ಇದೀಗ ಡಿಎಂಕೆ, ಸುಪ್ರೀಮ ಕೋರ್ಟ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ಈ ಮೀಸಲಾತಿ ತಾರತಮ್ಯವನ್ನು ಕಾನೂನುಬದ್ಧಗೊಳಿಸುತ್ತದೆ ಎಂದು ತನ್ನ ವಾದ ಮಂಡಿಸಿದೆ.
ಮಂಡಲ ಕುರಿತ 1992ರಲ್ಲಿ ಒಂಭತ್ತು ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠ ನೀಡಿರುವ ಆದೇಶ ಈ ಮೀಸಲಾತಿಯಿಂದ ಉಲ್ಲಂಘನೆಯಾಗುತ್ತದೆ ಎಂದು ತಮಿಳುನಾಡಿನ ಡಿಎಂಕೆ ಪ್ರತಿಪಾದಿಸುತ್ತಿದೆ.