ವಿಜಯಪುರ: ಉಚಿತ ಕೊಡುಗೆಗಳ ಬೇಡಿಕೆ ಇಡುವುದು ಮತ್ತು ಸ್ವೀಕರಿಸುವ ಜನರೇ ರಾಜಕಾರಣಿಗಳನ್ನು ಭ್ರಷ್ಟಗೊಳಿಸುತ್ತಿದ್ದಾರೆ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚುನಾವಣೆಗಳನ್ನು ಭ್ರಷ್ಟಮುಕ್ತವಾಗಿ ನಡೆಯಬೇಕೆಂದು ಪ್ರಯತ್ನಿಸಿದರೂ ಜನರು ಎಲ್ಲಿಯವರೆಗೆ ಉಡುಗೊರೆಗಳನ್ನು ಪಡೆಯುವುದು ಸರಿಯಲ್ಲ ಎಂದು ಭಾವಿಸುವುದಿಲ್ಲವೋ ಅಲ್ಲಿಯವರೆಗೂ ಈ ಕೆಟ್ಟ ಸಂಸ್ಕೃತಿ ಮುಂದುವರೆಯುತ್ತದೆ ಎಂದರು.
ರಾಜಕಾರಣಿಗಳಿಂದ ಉಡುಗೊರೆ ಪಡೆದರೆ ಪ್ರತಿನಿಧಿಗಳು ಜನರು ಉಚಿತವಾಗಿ ಮತ ನೀಡಿಲ್ಲ, ಉಡುಗೊರೆ ಪಡೆದು ಮತ ಹಾಕಿದ್ದಾರೆರೆಂದು ಹೇಳುತ್ತಾರೆ. ಕೆಲವು ಜನರು ತಮ್ಮ ಇಡೀ ಜೀವನವೇ ಉಚಿತ ಕೊಡುಗೆಗಳ ಮೇಲೆ ಅವಲಂಬಿತವಾಗಿದೆ ಎಂಬಂತೆ ವರ್ತಿಸುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿರು.
ಜನರು ಬಯಸಿದಲ್ಲಿ, ರಾಜಕಾರಣಿಗಳು ನೀಡುವ ಉಡುಗೊರೆ, ಆಮಿಷಗಳನ್ನು ತಿರಸ್ಕರಿಸಿ ಚುನಾವಣೆಯಲ್ಲಿ ಪಾರದರ್ಶಕತೆ ತರಬಹುದು ಎಂದು ಹೇಳಿದ ಅವರು, ಕೆಲಸ ಮಾಡುವ ಮತ್ತು ಚುನಾವಣೆಯಲ್ಲಿ ಗೆದ್ದ ನಂತರ ಜನರೊಟ್ಟಿಗೆ ಇರುವುದನ್ನು ಬಿಟ್ಟು ಹಣ ಮಾಡುವುದಕ್ಕಾಗಿ ರಾಜಧಾನಿಯಲ್ಲಿ ಕುಳಿತುಕೊಳ್ಳುವ ರಾಜಕಾರಣಿಗಳಿಗೆ ಮತ ಹಾಕಬೇಡಿ ಎಂದು ಜನತೆಗೆ ಸಭಾಪತಿ ಕೇಳಿಕೊಂಡರು.