ಚಿಕ್ಕಮಗಳೂರು : ರೋಗಿಗಳಿಗೆ ಆಪರೇಷನ್ ಮಾಡುವ ಮೊದಲು ಕಂಠಪೂರ್ತಿ ಮದ್ಯ ಸೇವಿಸಿ ನಿಯಂತ್ರಣದಲ್ಲಿರದ ಸರಕಾರಿ ವೈದ್ಯರೊಬ್ಬರು ಆಪರೇಷನ್ ಥೇಟರ್ ನಲ್ಲೇ ಕುಸಿದು ಬಿದ್ದ ಘಟನೆ ಜಿಲ್ಲೆಯ ಕಳಸ ತಾಲೂಕಾ ಆಸ್ಪತ್ರೆಯಲ್ಲಿ ಗುರುವಾರ ಸಂಭವಿಸಿದೆ.
ಸರ್ಜನ್ ಡಾ. ಬಾಲಕೃಷ್ಣ ಎಂಬುವರು ಮದ್ಯ ಸೇವಿಸಿ ಮಹಿಳೆಯರ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಲು ಬಂದಿದ್ದರು. ಆಪರೇಷನ್ ಮೊದಲೇ ನಿಗದಿಯಾಗಿದ್ದರಿಂದ ಒಂಭತ್ತು ಮಹಿಳೆಯರಿಗೆ ಅನಸ್ತೇಷಿಯಾ ನೀಡಲಾಗಿತ್ತು. ಈ ವೇಳೆ ಆಸ್ಪತ್ರೆಗೆ ಬಂದ ಡಾ. ಬಾಲಕೃಷ್ಣ ಕುಡಿದ ಅಮಲಿನಲ್ಲಿ ನಿಲ್ಲಲೂ ಆಗದೇ ಕೆಳಗೆ ಬಿದ್ದಿದ್ದಾರೆ. ಹಾಗಾಗಿ ಇಂದು ನಡೆಯ ಬೇಕಿದ್ದ ಆಪರೇಷನ್ ಮುಂದೂಡಲಾಯಿತು.
ಅನಸ್ತೇಸಿಯ ನೀಡಿದ್ದ ಮಹಿಳೆಯರು ಎಚ್ಚರಗೊಂಡ ನಂತರ ಅವರನ್ನು ಮನೆಗೆ ಕಳುಹಿಸಲಾಗಿದೆ. ಕಳಸಾ ತಾಲೂಕು ಆಸ್ಪತ್ರೆಯ ವೈದ್ಯ ಬಾಲಕೃಷ್ಣರನ್ನು ಈಗ ಚಿಕಿತ್ಸೆಗಾಗಿ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ!