ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ಕೊಟ್ಟಿದ್ದು ಚುನಾವಣಾ ಆಯೋಗ ಚಿಲುಮೆ ಸಂಸ್ಥೆಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ವೋಟರ್ ಐಡಿ ಅಕ್ರಮದ ಹಿಂದೆ ಸಚಿವ ಅಶ್ವತ್ಥನಾರಾಯಣ ಕೈವಾಡ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥನಾರಾಯಣ, ವೋಟರ್ ಐಡಿ ಅಕ್ರಮದಲ್ಲಿ ನಾನು ಭಾಗಿಯಾಗಿಲ್ಲ. ರವಿಕುಮಾರ್ ಎಂಬುವವರು ನನ್ನ ಕ್ಷೇತ್ರದವರು ಹಾಗಾಗಿ ನನಗೆ ಗೊತ್ತು. ಆದರೆ ಚಿಲುಮೆ ಸಂಸ್ಥೆಯವರು ಏನು ಅಕ್ರಮ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಈ ಸಂಸ್ಥೆಗಳಿಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಮತದಾರರ ಸರ್ವೆ ನಡೆಯುವುದು ಚುನಾವಣಾ ಆಯೋಗದ ಅಡಿಯಲ್ಲಿ. ಚಿಲುಮೆ ಸಂಸ್ಥೆಗೆ ಸರ್ವೆ ಕಾರ್ಯಕ್ಕೆ ಸೂಚಿಸಿದ್ದು ಚುನಾವಣಾ ಆಯೋಗ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ನನ್ನ ವಿರುದ್ಧ ಆರೋಪ ಮಾಡುವ ನೈತಿಕತೆ ಇಲ್ಲ. ಕಾಂಗ್ರೆಸ್ ನವರೇ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.