ದಾಂಡೇಲಿ, ೧೫- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಮೊಸಳೆ ಕಾಟ ಹೆಚ್ಚಾಗಿದ್ದು ಕಾಳಿನದಿ ಭಾಗದ ಜನರು ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ.
ಕೆಲ ಸಮಯದಲ್ಲೇ ಸುಮಾರು 5 ಜನರನ್ನು ಮೊಸಳೆಗಳು ಬಲಿ ತೆಗೆದುಕೊಂಡಿವೆ. ಇಷ್ಟಾದರೂ ಜಿಲ್ಲಾ ಆಡಳಿತ ಮಂಡಳಿ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಇದು ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದೆ.
ದಾಂಡೇಲಿ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ದೇಶ ವಿದೇಶಗಳಿಂದಲೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಈಗ ಪ್ರವಾಸಿಗರು ಕಾಳಿನದಿಗೆ ಇಳಿಯುವುದಕ್ಕೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವರ್ಷದಿಂದ ಮೊಸಳೆಗೆ ಐದು ಜನ ಬಲಿಯಾಗಿದ್ದಾರೆ.
ಇಷ್ಟಾದರೂ ಇಲ್ಲಿನ ಜಿಲ್ಲಾಡಳಿತ ಅಥವಾ ಅರಣ್ಯ ಇಲಾಖೆ ಅಧಿಕಾರಿಗಳಾಗಳಿ ಏನೂ ತಲೆಕೆಡಿಸಿಕೊಂಡಿಲ್ಲ. ಎಲ್ಲೆಲ್ಲಿ ಮೊಸಳೆ ಇವೆ ಅನ್ನುವುದನ್ನು ಗುರ್ತಿಸಿ ಅಂಥ ಜಾಗಗಳಿಗೆ ನಿರ್ಬಂಧ ಮಾಡುವ ಕೆಲಸವನ್ನೂ ಮಾಡಿಲ್ಲ ಎಂದು ಜನ ದೂರಿದ್ದಾರೆ.