ಅಬುಧಾಬಿ: ಯುಎಇ ರಾಜಧಾನಿ ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಪ್ರಯಾಣಿಕರ ಮುಖವನ್ನು ಸ್ಕ್ಯಾನ್ ಮಾಡಿ, ಬೋರ್ಡಿಂಗ್ ಪಾಸ್ ನೀಡಲಾಗುತ್ತದೆ.
ಇನ್ನು ಮುಂದೆ ನೀವು ಪಾಸಪೋರ್ಟ ಅಥವಾ ಟಿಕೆಟ್ ತೋರಿಸಬೇಕಾಗಿಲ್ಲ. ಆಯ್ದ ಸ್ವಯಂಸೇವಾ ಬ್ಯಾಗೇಜ್ ಟಚ್ ಪಾಯಿಂಟ್‌ಗಳು, ವಲಸೆ ಇ-ಗೇಟ್‌ಗಳು, ಬೋರ್ಡಿಂಗ ಗೇಟ್‌ಗಳು ಹಾಗೂ ಎಲ್ಲ ಪ್ರಯಾಣಿಕ ಟಚ್ ಪಾಯಿಂಟ್‌ಗಳಲ್ಲಿ ಮುಖ ಗುರುತಿಸುವ ಸೇವೆಗಳನ್ನು ಆರಂಭಿಸಲಾಗಿದೆ. ಅಬುಧಾಬಿ ಮೂಲದ ಟೆಕ್ ಕಂಪನಿ ನೆಕ್ಸ್ಟ್50 ಈ ಸುಧಾರಿತ ಕೃತಕ ಬುದ್ಧಿ ಮತ್ತೆ ಆಧರಿಸಿದ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ ಎಂದು ಖಲೀಜ ಟೈಮ್ಸ ಪತ್ರಿಕೆ ವರದಿ ಮಾಡಿದೆ.
ಹೈಟೆಕ್ ಬಯೋಮೆಟ್ರಿಕ್ ಕ್ಯಾಮೆರಾ ಮೂಲಕ ಪ್ರಯಾಣಿಕರ ಎಲ್ಲ ವಿವರಗಳನ್ನೂ ಗ್ರಹಿಸಿಕೊಂಡು ಈ ಯಂತ್ರವು ಎಲ್ಲ ದಾಖಲೆಗಳನ್ನು ದೃಢೀಕರಿಸುತ್ತದೆ. ಇದರಿಂದ ಪ್ರಯಾಣಿಕರಿಗೆ ಸರಳ, ಆರಾಮದಾಯಕ, ಸಂಪರ್ಕರಹಿತ ಸೇವೆ ಲಭ್ಯವಾಗಲಿದ್ದು, ಸರತಿಯಲ್ಲಿ ನಿಂತು ಕಾಯಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗುವುದಿಲ್ಲ ಎಂದು ಅಬುಧಾಬಿ ಏರಪೋರ್ಟ ಸಿಇಒ ಜಮಾಲ್ ಸಲೀಮ ಅಲ್ ಧಹೇರಿ ಹೇಳಿದ್ದಾರೆ.