ಮುಂಬೈ: ಹಿರಿಯ ಖ್ಯಾತ ಹಿಂದಿ ನಟಿ ತಬಸುಮ್ ಅವರು ಶನಿವಾರ ತೀವ್ರ ಹೃದಯಾಘಾತದಿಂದ ನಿಧನರಾಗಿದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಬಾಲ ಕಲಾವಿದೆಯಾಗಿ ಮತ್ತು ಜನಪ್ರಿಯ ದೂರದರ್ಶನ ಟಾಕ್ ಶೋ ಆಗಿದ್ದ ಫೂಲ್ ಖಿಲೇ ಹೈಂ ಗುಲ್ಶನ್ ಗುಲ್ಶನ್ ನಿರೂಪಕಿಯಾಗಿ ತಬಸುಮ್ ಹೆಸರುವಾಸಿಯಾಗಿದ್ದರು. ತಬಸುಮ್ ಅವರು ಹೃದಯಾಘಾತದಿಂದ ನಿಧನರಾದರು ಎಂದು ಅವರ ಪುತ್ರ ಹೋಶಾಂಗ ಗೋವಿಲ್ ತಿಳಿಸಿದ್ದಾರೆ.
ಗ್ಯಾಸ್ಟ್ರೋ ಸಮಸ್ಯೆಯಿಂದ ತಪಾಸಣೆಗಾಗಿ ಆಸ್ಪತ್ರೆಗೆ ಹೋದಾಗ ಶುಕ್ರವಾರ ರಾತ್ರಿ 8.40 ಮತ್ತು 8.42 ಕ್ಕೆ ಎರಡು ಬಾರಿ ಹೃದಯಾಘಾತದ ನಂತರ ಅವರು ಸಾವನ್ನಪ್ಪಿದರು ಎಂದು ಪುತ್ರ ಹೋಶಾಂಗ್ ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದುದಾಗಿ ವರದಿಯಾಗಿದೆ.
ಬಾಲ ಕಲಾವಿದೆಯಾಗಿ ಬೇಬಿ ತಬಸುಮ್ ಎಂದು ಖ್ಯಾತರಾಗಿದ್ದರು. 1940 ರ ದಶಕದ ಉತ್ತರಾರ್ಧದಲ್ಲಿ ನರ್ಗೀಸ್, ಮೇರಾ ಸುಹಾಗ್, ಮಜಧರ್ ಮತ್ತು ಬಡಿ ಬೆಹೆನ್ ಆದಿ ಅವರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ದೂರದರ್ಶನದಲ್ಲಿ 1972 ರಿಂದ 1993 ರವರೆಗೆ ಆಗಿನ ಜನಪ್ರಿಯ “ಫೂಲ್ ಖಿಲೇ ಹೈಂ ಗುಲ್ಶನ್ ಗುಲ್ಶನ್” ಎಂಬ ದೇಶದ ಪ್ರಪ್ರಥಮ ಟಾಕ್ ಶೋ ನಡೆಸಿದ್ದರು.