ಮುಂಬೈ: 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಆಕೆಯ ಸಹೋದರ ಮತ್ತು ತಂದೆಯೇ ಬೆಂಕಿ ಹಚ್ಚಿ ಕೊಂದ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ನಾಂದೇಡ ಜಿಲ್ಲೆಯಲ್ಲಿ ನಡೆದಿದೆ.
ಮೂರನೇ ವರ್ಷದ ಬಿಎಚ್ಎಂಎಸ್ (ಹೋಮಿಯೋಪತಿ ಮೆಡಿಸಿನ್ ಮತ್ತು ಸರ್ಜರಿ ಪದವಿ) ವ್ಯಾಸಂಗ ಮಾಡುತ್ತಿದ್ದ ಕೊಲೆಯಾದ ಶುಭಾಂಗಿ ಜೋಗ್ದಂಡ್ ವಿವಾಹ ನಿಶ್ಚಯವಾಗಿತ್ತು. ಆದರೆ ತಾನು ಯುವಕನೋರ್ವನನ್ನು ಪ್ರೇಮಿಸುತ್ತಿರುವುದಾಗಿ ಆಕೆ ಹೇಳಿದ್ದಳು, ಇದರ ಕಾರಣ ಮದುವೆ ಮುರಿದು ಬಿದ್ದಿತ್ತು.ಇದರಿಂದ ತೀವ್ರ ಅಸಮಾಧಾನಗೊಂಡ ಯುವತಿಯ ತಂದೆ, ಸಹೋದರ, ಹಾಗೂ ಕುಟುಂಬದ ಇನ್ನಿತರ ಸದಸ್ಯರು ಆಕೆಯನ್ನು ಜ.22 ರಂದು ಜಮೀನಿಗೆ ಕರೆದೊಯ್ದು ಕೊರಳು ಬಿಗಿದು ಹತ್ಯೆ ಮಾಡಿ, ಆಕೆಯ ಶವವನ್ನು ಸುಟ್ಟು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರು.
ಆರೋಪಿಗಳನ್ನು ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಬಂಧಿಸಲಾಗಿದೆ. ಆಕೆಯ ಪ್ರೇಮ ಪ್ರಕರಣವನ್ನು ವಿರೋಧಿಸಿ ಮನೆಯವರೇ ಈ ಭೀಕರ ಹತ್ಯೆಯಲ್ಲಿ ಭಾಗಿಯಾಗಿದ್ದು ಪ್ರಕರಣದ ಸಂಬಂಧ ಐದು ಜನರನ್ನು ಬಂಧಿಸಲಾಗಿದೆ. ಜ.22 ರಂದು ಈ ಹತ್ಯೆ ನಡೆದಿದೆ.