ಅಗ್ನಿವೀರರು ದೇಶ ಸೇವೆಗೆ ಸಜ್ಜು

A B Dharwadkar
ಅಗ್ನಿವೀರರು ದೇಶ ಸೇವೆಗೆ ಸಜ್ಜು

ಬೆಳಗಾವಿ, 5- ನಗರದ‌ ಮರಾಠಾ ಲಘು ಪದಾತಿ‌ ದಳದಲ್ಲಿ ತರಬೇತಿ ಪೂರ್ಣಗೊಳಿಸಿರುವ ಅಗ್ನಿವೀರ ಮೊದಲ ತಂಡದ ನಿರ್ಗಮನ ಪಥಸಂಚಲನ ಶನಿವಾರ ಮುಂಜಾನೆ ತರಬೇತಿ ಕೇಂದ್ರದಲ್ಲಿ ಜರುಗಿತು. ಸುರಿಯುತ್ತಿದ್ದ ಮಳೆಯಲ್ಲಿ ನೆನೆದು ಪ್ರಶಿಕ್ಷಣಾರ್ಥಿಗಳು ಪಥಸಂಚಲನ ನಡೆಸಿದರು.

ಎಂ .ಎಲ್.ಐ.ಆರ್. ಕೇಂದ್ರದಲ್ಲಿ 31 ವಾರಗಳ ಕಾಲ ತರಬೇತಿ ಪಡೆದ 111 ಅಗ್ನಿವೀರರು ದೇಶ ಕಾಯಲು ಸಿದ್ದರಾಗಿದ್ದಾರೆ. ಅಗ್ನಿ ವೀರರ ನಿರ್ಗಮನ ಪಥಸಂಚಲನ ಗಮನಸೆಳೆಯಿತು. ತರಬೇತಿ ಮುಗಿಸಿದ ಅಗ್ನಿವೀರರು ದೇಶಸೇವೆಗೆ ಸಮರ್ಪಣೆಗೊಂಡರು.

31 ವಾರಗಳ ಕಾಲ ತರಬೇತಿಯಲ್ಲಿ ಪಡೆದ ಕೌಶಲ,‌ ಕಸರತ್ತುಗಳನ್ನು ಅವರು ಮಳೆಯಲ್ಲೇ ಪ್ರದರ್ಶಿಸಿದರು. ಮಳೆ ಮಧ್ಯೆಯೂ ಶಿಬಿರಾರ್ಥಿಗಳು ನಡೆಸಿದ ಆಕರ್ಷಕ ಪಥಸಂಚಲನ ಗಮನಸೆಳೆಯಿತು.

ಜ್ಯೂನಿಯರ್ ಲೀಡರ್ಸ ವಿಂಗ್ ಕಮಾಂಡರ್, ವಿಎಸ್ ಮೇಜರ್ ಜನರಲ್ ಆರ್.ಎಸ್. ಗುರಯ್ಯ ಅವರು ಅಗ್ನಿವೀರರನ್ನು ಉದ್ದೇಶಿಸಿ ಮಾತನಾಡಿದರು. ಐಆರ್ ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜಯದೀಪ್ ಮುಖರ್ಜಿ ಸೇರಿದಂತೆ ಅಧಿಕಾರಿಗಳು ಹಾಗೂ ಸೈನಿಕರ ಕುಟುಂಬಸ್ಥರ ಇದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.