ಬೆಂಗಳೂರು : ರಾಜ್ಯದಲ್ಲಿ ನಿನ್ನೆ ಒಂದೇ ದಿನ ಮಳೆಗೆ ಐವರು ಬಲಿಯಾಗಿದ್ಧಾರೆ. ಬೆಂಗಳೂರಿನಿಂದ ರಾಯಚೂರುವರೆಗೂ 15ಕ್ಕೂ ಹೆಚ್ಚು ಜಿಲ್ಲೆಗಳು ತತ್ತರಿಸಿವೆ.
ಕಳೆದ ರಾತ್ರಿ ಬೆಂಗಳೂರು ಸೇರಿ ಹೊರವಲಯದಲ್ಲಿ ಭಾರೀ ಮಳೆಯಾಗಿದೆ. ರಾಮನಗರ, ಚನ್ನಪಟ್ಟಣ ಕುಂಭದ್ರೋಣ ಮಳೆಗೆ ಜನ ತತ್ತರಿಸಿದ್ದು, ಇನ್ನೂ ನಾಲ್ಕು ದಿನ ರಾಜ್ಯದಲ್ಲಿ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.



