ಪಣಜಿ, ೧೨: ಗೋವಾ ಕಡಲತೀರದಲ್ಲಿ ಗೂಳಿಯೊಂದು ಇರಿದ ಪರಿಣಾಮ 79 ವರ್ಷದ ಬ್ರಿಟನ್ ಮಹಿಳೆಯೊಬ್ಬರು ಗಾಯಗೊಂಡಿದ್ದು ಅವರನ್ನು ದಕ್ಷಿಣ ಗೋವಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿದೇಶಿಯರು ಹೆಚ್ಚು ಬರುವ ದಕ್ಷಿಣ ಗೋವಾದ ಬೆನೊಲಿಮ್ ಬೀಚದಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬ್ರಿಟನ್ ಮಹಿಳೆ ಮೋರಿಸ್ ಎಂಬುವರು ಇತರ ಸ್ನೇಹಿತರೊಂದಿಗೆ ಕಡಲ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಾಯಿಯೊಂದು ಗೂಳಿಯನ್ನು ಅಟ್ಟಿಸಿಕೊಂಡು ಬಂದಿದ್ದರಿಂದ ಓಡುವ ಭರದಲ್ಲಿ ಮಹಿಳಗೆ ಕೊಂಬುಗಳಿಂದ ಇರಿದಿದೆ. ಮಹಿಳೆಯ ಕಾಲಿಗೆ ಇರಿತದ ಗಾಯಗಳಾಗಿದ್ದು ಐದು ಹೊಲಿಗೆಗಳನ್ನು ಹಾಕಲಾಗಿದೆ. ಸದ್ಯ ಮಹಿಳೆಯ ಸ್ಥಿತಿ ಉತ್ತಮವಾಗಿದೆ ಎಂದು ಜಿಲ್ಲಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.