ಕೆಪಿಟಿಸಿಎಲ್ ಪರೀಕ್ಷೆ ನಕಲು; ಗೋಕಾಕ ತಾಲೂಕಿನ ನಾಲ್ವರ ಬಂಧನ

A B Dharwadkar
ಕೆಪಿಟಿಸಿಎಲ್ ಪರೀಕ್ಷೆ ನಕಲು; ಗೋಕಾಕ ತಾಲೂಕಿನ ನಾಲ್ವರ ಬಂಧನ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಗೋಕಾಕ : ಕಳೆದ ಅಗಸ್ಟ 7 ರಂದು ಜರುಗಿದ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಯ ಪರೀಕ್ಷೆಯಲ್ಲಿ ನಕಲು ಮಾಡಿದ್ದ ನಾಲ್ವರು ಅಭ್ಯರ್ಥಿಗಳನ್ನು ಗೋಕಾಕ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಇದರಿಂದ ಬೆಳಗಾವಿ ಜಿಲ್ಲೆಯಲ್ಲಿ ಬಂಧಿತರ ಸಂಖ್ಯೆ 45ಕ್ಕೇರಿದೆ.

ಗೋಕಾಕ ತಾಲ್ಲೂಕಿನ ಮರಡಿಮಠ ಗ್ರಾಮದ 21 ವರುಷದ ವೈಷ್ಣವಿ ಬಾಳಪ್ಪ ಸನದಿ, ಉಪ್ಪಾರಟ್ಟಿಯ 24 ವರುಷದ ಸುಧಾರಾಣಿ ಹೂವಪ್ಪ ಅರಭಾವಿ ಹಾಗೂ ತುಕ್ಕಾನಟ್ಟಿಯ ಐಶ್ವರ್ಯ ರಾಮಚಂದ್ರ ಬಾಗೇವಾಡಿ ಮತ್ತು ಬಸವರಾಜ ರಾಮಪ್ಪ ಹಾವಡಿ ಎಂಬವರನ್ನು ವಶಕ್ಕೆ ಪಡೆದು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.

ಬಂಧಿತ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಲು ಇಲೆಕ್ಟ್ರಾನಿಕ್ ಡಿವೈಸ್, ಮೈಕ್ರೋ ಚಿಪ್ ಕಾರ್ಡ, ಮೊಬೈಲ್ ಫೋನ್ ಬಳಸಿದ್ದರು, ಈ ಸಾಧನಗಳನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಸಾಕ್ಷಿಯಾಗಿ ನೀಡಲಾಯಿತು.

ಕಳೆದ ಸೋಮವಾರ ಗೋಕಾಕ ತಾಲ್ಲೂಕಿನ ಮೂವರು ಸೇರಿದಂತೆ ಅಥಣಿ ಮತ್ತು ಬೈಲಹೊಂಗಲ ತಾಲ್ಲೂಕಿನ ತಲಾ ಒಬ್ಬೊಬ್ಬರನ್ನು ವಶಕ್ಕೆ ಪಡೆಯಲಾಗಿತ್ತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.